7

ಮಂಗಳೂರು: ಯುವಕ ಆತ್ಮಹತ್ಯೆ

Published:
Updated:

ಮಂಗಳೂರು: ನಗರದ ಬಲ್ಮಠ ವೃತ್ತದಲ್ಲಿರುವ ಎಮ್ಜಾಯ್ಸ್ ಕಾಂಪ್ಲೆಕ್ಸ್ ಕೊಠಡಿಯೊಂದರಲ್ಲಿ ಸೋಮವಾರ ಬೆಳಿಗ್ಗೆ ಯುವಕನೊಬ್ಬ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿಯ ಸಬ್ ಇನ್ ಸ್ಪೆಕ್ಟರ್ ಪದ್ಮಯ್ಯ ರಾಣೆ ಅವರ ಮಗ ಅಂಕಿತ್ ರಾಣೆ (28) ಮೃತ ಯುವಕ. ನಗರದ ಖಾಸಗಿ ಕಂಪೆನಿಯೊಂದರ ಉದ್ಯೋಗಿಯಾಗಿದ್ದ ಅಂಕಿತ್ ಮಲ್ಲಿಕಟ್ಟೆಯಲ್ಲಿ ಕುಟುಂಬದ ಜೊತೆ ವಾಸವಾಗಿದ್ದ.

ಯುವಕ ಕೆಲಸ ಮಾಡುತ್ತಿದ್ದ ಸಂಸ್ಥೆಯ ದಾಸ್ತಾನು ಕೊಠಡಿ ಎಮ್ಜಾಯ್ ಕಾಂಪ್ಲೆಕ್ಸ್ ನಲ್ಲಿದೆ. ಸೋಮವಾರ ಬೆಳಿಗ್ಗೆ ಅಲ್ಲಿಗೆ ಬಂದು ನೇಣು ಬಿಗಿದುಕೊಂಡಿದ್ದಾನೆ. ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‍‌

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !