ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಯುವ ಭಾಷೆಗಳಲ್ಲಿ ಕನ್ನಡವೂ ಇರುವುದು ವಿಷಾದನೀಯ: ನಿರ್ದೇಶಕ ಪಿ. ಶೇಷಾದ್ರಿ

Last Updated 24 ನವೆಂಬರ್ 2022, 13:42 IST
ಅಕ್ಷರ ಗಾತ್ರ

ಮುಡಿಪು: ‘ವಿಶ್ವದ ಅತಿ ಶೀಘ್ರದಲ್ಲಿ ಸಾಯುವ ಭಾಷೆಗಳಲ್ಲಿ ಕನ್ನಡವೂ ಇರುವುದು ವಿಷಾದನೀಯ. ಇದನ್ನು ಕನ್ನಡಿಗರೇ ಸುಳ್ಳಾಗಬೇಕಿಸಿದೆ’ ಎಂದುಸಿನಿಮಾ ನಿರ್ದೇಶಕ ಪಿ. ಶೇಷಾದ್ರಿ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ಮಂಗಳಾ ಸಭಾಂಗಣದಲ್ಲಿ ಗುರುವಾರ ನಡೆದ ‘ಬಾರಿಸು ಕನ್ನಡ ಡಿಂಡಿಮವ’ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎರಡು ಕೃತಿಗಳ ಬಿಡುಗಡೆ, ಉಪನ್ಯಾಸ, ಸುಗಮ ಸಂಗೀತ ಹಾಗೂ ಏಕವ್ಯಕ್ತಿ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚೆಗೆ ಮಂಗೋಲಿಯಾದಲ್ಲಿ ನೂರು ವರ್ಷದ ಒಬ್ಬ ವ್ಯಕ್ತಿಯೊಬ್ಬನ ಸಾವಿನೊಂದಿಗೆ ಒಂದು ಭಾಷೆಯ ಅಂತ್ಯವೂ ಆಯಿತು. ನಾವೂ ಎಚ್ಚರಗೊಳ್ಳುವ ಅಗತ್ಯವಿದೆ. ಯಾಕೆಂದರೆ ನಾವು ಆಲೋಚಿಸಿ ಸಮರ್ಥವಾಗಿ ಭಾಷೆಯನ್ನು ದಾಟಿಸಬೇಕಿದೆ ಎಂದರು.

ಬೆಂಗಳೂರಿನ ಇತ್ತೀಚಿನ ವಾತಾವರಣ ನೋಡಿದರೆ ಕನ್ನಡ ಸಾಯುವ ಆತಂಕ ಇದೆ. ಯಾಕೆಂದರೆ ನಮ್ಮ ನೆರೆಯ ರಾಜ್ಯಗಳಲ್ಲಿ ಜನರು ಅವರ ನಾಡಿನ ಭಾಷೆಗೇ ಪ್ರಾಧಾನ್ಯತೆ ಕೊಡುವಾಗ ಕನ್ನಡಿಗರು ಯಾಕೆ ಕನ್ನಡ ಮಾತನಾಡದೆ ಅವರ ನಾಡಿನ ಭಾಷೆ ಬಳಸಬೇಕು? ನಾವಾದರೂ ‘ಅಪ್ಪ ಅಮ್ಮ’ ಎಂದು ಪ್ರೀತಿಯಿಂದ ಕರೆದರೆ ಕನ್ನಡ ಭಾಷಾ ಪ್ರೇಮ ಸಹಜವಾಗಿ ಬೆಳೆಯುತ್ತದೆ ಎಂದರು.

ಬೆಳ್ಮಣ್ಣು ಪದವಿಪೂರ್ವ ಕಾಲೇಜಿನ‌ ನಿವೃತ್ತ ಪ್ರಾಂಶುಪಾಲ ಡಾ. ಜನಾರ್ದನ ಭಟ್ ಬರೆದ ‘ಕರಾವಳಿಯ ಕವಿರಾಜ ಮಾರ್ಗ’ ಹಾಗೂ ನಿಟ್ಟೆ ಪರಿಗಣಿತ ವಿ.ವಿಯ ಮಾನವಿಕ‌ ವಿಭಾಗದ ಡೀನ್ ಡಾ. ಸಾಯಿಗೀತಾ ಹಾಗೂ ಬೆನೆಟ್ ಡಿ. ಅಮ್ಮನ್ನ ಬರೆದ ‘ಮಂಗಳೂರು ಸಮಾಚಾರ ಕಂನಡ ಸಮಾಚಾರ’ ಕೃತಿ ಬಿಡುಗಡೆ ಹಾಗೂ ಕೆ.ಆರ್. ಗೋಪಾಲಕೃಷ್ಣ ಬಳಗದಿಂದ ಸುಗಮ ಸಂಗೀತ ಹಾಗೂ ಶ್ವೇತ ಅರೆಹೊಳೆ ಅವರಿಂದ ಏಕವ್ಯಕ್ತಿ ನಾಟಕ ಪ್ರದರ್ಶನ ನಡೆಯಿತು. ‌ವಿವಿ ಹಣಕಾಸು ಅಧಿಕಾರಿ ಪ್ರೊ. ಸಂಗಪ್ಪ, ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ‌ಪ್ರೊ. ಸೋಮಣ್ಣ ಹೊಂಗಳ್ಳಿ, ಸಹಾಯಕ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT