ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಸರಗೋಡು: ಎಟಿಎಂಗೆ ತುಂಬಲು ತಂದಿದ್ದ ₹ 50 ಲಕ್ಷ ಕಳವು

Published 28 ಮಾರ್ಚ್ 2024, 14:07 IST
Last Updated 28 ಮಾರ್ಚ್ 2024, 14:07 IST
ಅಕ್ಷರ ಗಾತ್ರ

ಕಾಸರಗೋಡು: ಉಪ್ಪಳ ಪೇಟೆಯಲ್ಲಿ ಎಟಿಎಂನಲ್ಲಿ ಇರಿಸಲು ತರುತ್ತಿದ್ದ ₹ 50 ಲಕ್ಷ ಮೊತ್ತವನ್ನು ವ್ಯಾನ್‌ನಿಂದ ಹಾಡಹಗಲೇ ಕಳವು ಮಾಡಲಾಗಿದೆ. ಸ್ಥಳೀಯ ಆ್ಯಕ್ಷಿಸ್ ಬ್ಯಾಂಕ್‌ನ ಎಟಿಎಂನಲ್ಲಿ ಹಣ ಇರಿಸುವ ನಿಟ್ಟಿನಲ್ಲಿ ನಿಲುಗಡೆ ಮಾಡಲಾಗಿದ್ದ ವ್ಯಾನ್‌ನಲ್ಲಿದ್ದ ಹಣದ ಪೆಟ್ಟಿಗೆಯನ್ನು ಎಗರಿಸಲಾಗಿದೆ.

ಇಬ್ಬರು ಸಿಬ್ಬಂದಿ ವ್ಯಾನ್‌ನಲ್ಲಿದ್ದು ಎಟಿಎಂ ಒಳಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದು ಆರೋಪಿಗಳ ಸುಳಿವು ಸಿಕ್ಕಿದೆ ಎಂದು ತಿಳಿಸಿದ್ದಾರೆ.

ಕಳೆದ ತಿಂಗಳು ಉಪ್ಪಳ ಪೇಟೆಯ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಕಳವಿಗೆ ಯತ್ನ ನಡೆಸಿ ಯಂತ್ರವನ್ನು ಹಾನಿ ಮಾಡಿದ್ದರಲ್ಲಿ ಇದೇ ತಂಡದ ಕೈವಾಡ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮಗು ಅಪಹರಣಕ್ಕೆ ಯತ್ನ

ಕಾಸರಗೋಡು: ಬೇಕಲದ ಕೋಟೆಕುನ್ನು ಎಂಬಲ್ಲಿ ಅಪರಿಚಿತನೊಬ್ಬ ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮಗುವಿನ ಅಪಹರಣಕ್ಕೆ ಯತ್ನಿಸಿದ ಘಟನೆ ನಡೆದಿದೆ. ಮಗುವನ್ನು ಎತ್ತಿದಾಗ ಜೋರಾಗಿ ಅತ್ತಿತ್ತು. ಅದನ್ನು ಕೇಳಿ ಮನೆಮಂದಿ ಹೊರಗೆ ಬಂದು ನೋಡಿದಾಗ ಗೇಟಿನ ಬಳಿ ಮಗುವನ್ನು ಬಿಟ್ಟು ಆರೋಪಿ ಪರಾರಿಯಾಗಿದ್ದ. ಬೇಕಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT