ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಳೆಯನ ಮೂಗು ಕಚ್ಚಿ ತುಂಡರಿಸಿದ ಯುವಕ

ಹೊಸ ವರ್ಷಾಚರಣೆ ವೇಳೆ ಗಲಾಟೆ  
Published 1 ಜನವರಿ 2024, 23:41 IST
Last Updated 1 ಜನವರಿ 2024, 23:41 IST
ಅಕ್ಷರ ಗಾತ್ರ

ಬೆಳ್ತಂಗಡಿ: ಸಮೀಪದ ಪಿಲ್ಯದಲ್ಲಿ ಭಾನು ವಾರ ರಾತ್ರಿ ಹೊಸ ವರ್ಷಾಚರಣೆಯಲ್ಲಿ ನಿರತರಾಗಿದ್ದ ಇಬ್ಬರು ಯುವಕರ ನಡುವೆ ಗಲಾಟೆ ನಡೆದಿದ್ದು, ಯುವಕನೊಬ್ಬನ ಮೂಗನ್ನು ಆತನ ಗೆಳೆಯ ಕಚ್ಚಿ ತುಂಡರಿಸಿದ್ದಾನೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

‘ಪಿಲ್ಯ ಗ್ರಾಮದ ಉಲ್ಪೆ ನಿವಾಸಿ ದೀಕ್ಷಿತ್ (28)  ಮೂಗಿಗೆ ಗಾಯವಾಗಿದೆ. ಆತನ ಗೆಳೆಯ, ಮೂಡಿಗೆರೆ ತಾಲ್ಲೂಕಿನ ರಾಕೇಶ್ ಮೂಗು ಕಚ್ಚಿ ಗಾಯಗೊಳಿಸಿದ ಆರೋಪಿ. ಆರೋಪಿಯು ಪಿಲ್ಯ ಗ್ರಾಮದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಸಂಬಂಧಿಕರ ಮನೆಯಲ್ಲಿ ವಾಸವಿದ್ದಾನೆ’‌ ಎಂದು ಪೊಲೀಸರು ತಿಳಿಸಿದ್ದಾರೆ.

‘ಕೆಲ ಯುವಕರು ಸೇರಿ ಅಳದಂಗಡಿ ಯಲ್ಲಿ ಹೊಸ ವರ್ಷಾಚರಣೆ ನಡೆಸಿದ್ದರು. ಬಳಿಕ ವೈನ್‌ಶಾಪ್‌ ಒಂದರಲ್ಲಿ ಮದ್ಯ ಪಾನ ಮಾಡಿದ್ದರು. ಅಲ್ಲಿಂದ ಮನೆಗೆ ಮರಳುವಾಗ ದೀಕ್ಷಿತ್ ಮತ್ತು ರಾಕೇಶ್‌ ನಡುವೆ  ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದಿತ್ತು. ಇದು ವಿಕೋಪಕ್ಕೆ ತಿರುಗಿ, ರಾಕೇಶ್ ಸಿಟ್ಟಿನಿಂದ ದೀಕ್ಷಿತ್ ಮೂಗನ್ನು ಕಚ್ಚಿ ತುಂಡರಿಸಿದ್ದ. ಗಾಯಗೊಂಡ ದೀಕ್ಷಿತ್  ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಬಳಿಕ ಆತನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT