ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನವೋದ್ಯಮಿಗಳಿಗಾಗಿ ನಿಟ್ಟೆ ವಿವಿಯಲ್ಲಿ ಹೊಸ ಎಂಬಿಎ ಕೋರ್ಸ್

Published 30 ಮೇ 2024, 6:30 IST
Last Updated 30 ಮೇ 2024, 6:30 IST
ಅಕ್ಷರ ಗಾತ್ರ

ಮಂಗಳೂರು: ಹೊಸ ಉದ್ಯಮ ಆರಂಭಿಸಲು ಬಯಸುವವರಿಗೆ ಮತ್ತು ನಾಯಕತ್ವ ವಹಿಸಲು ಬಯಸುವ ಕೌಟುಂಬಿಕ ನೆಲೆಗಟ್ಟಿನ ವ್ಯವಹಾರಶೀಲರಿಗೆ ತರಬೇತಿ ನೀಡುವ ವಿಶಿಷ್ಟ ಎಂಬಿಎ ಕೋರ್ಸ್‌ ನಿಟ್ಟೆ ವಿಶ್ವವಿದ್ಯಾಲಯ ಆರಂಭಿಸಿದೆ ಎಂದು ಕುಲಪತಿ ಪ್ರೊ.ಎಂ.ಎಸ್‌.ಮೂಡಿತ್ತಾಯ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎರಡು ವರ್ಷ ಅವಧಿಯ ಕೋರ್ಸ್‌ಗೆ 30 ಮಂದಿಗೆ ಮಾತ್ರ ಪ್ರವೇಶಾವಕಾಶವಿದ್ದು ಪರೀಕ್ಷೆ ಶುಲ್ಕ ಹೊರತುಪಡಿಸಿ ವಾರ್ಷಿಕ ₹ 2.90 ಲಕ್ಷ ಶುಲ್ಕವಿದೆ. ಇದು ಉದ್ಯೋಗಕ್ಕಾಗಿರುವ ಕೋರ್ಸ್ ಅಲ್ಲ, ಉದ್ಯೋಗ ನೀಡಲು ಸಾಧ್ಯವಿರುವ ಉದ್ಯಮ ಕೋರ್ಸ್. ಸೀಡ್ ಫಂಡ್ ಸೌಲಭ್ಯವೂ ಇದರಲ್ಲಿ ಇದೆ ಎಂದರು.

ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಇದೇ ಮೊದಲು ಇಂಥ ವಿಶಿಷ್ಟ ಯೋಜನೆ ಜಾರಿಗೆ ಬರುತ್ತಿದ್ದು ನಿಟ್ಟೆ ಅಟಲ್ ಇನ್‌ಕ್ಯುಬೇಷನ್ ಸೆಂಟರ್ ಮತ್ತು ಜಸ್ಟಿಸ್ ಕೆ.ಎಸ್. ಹೆಗ್ಡೆ ನಿರ್ವಹಣಾ ಸಂಸ್ಥೆಗಳು ಜಂಟಿಯಾಗಿ ಕೋರ್ಸ್‌ ನಿರ್ವಹಿಸಲಿವೆ. ದೇಶದ 15 ವಿಶ್ವವಿದ್ಯಾಲಯಗಳಲ್ಲಿ ಈ ಕೋರ್ಸ್ ಇದೆ. ಮಾಹಿತಿ ಮತ್ತು ಅರ್ಜಿಗೆ ಸಂಬಂಧಿಸಿದ ವಿವರಗಳನ್ನು https://jkshim.nitte.edu.in ವೆಬ್‌ಸೈಟ್‌ನಿಂದ ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದರು.

ಎ.ಪಿ.ಆಚಾರ್‌, ಗೋಪಾಲ ಮೊಗರಾಯ ಹಾಗೂ ಗುರುರಾಜ್ ಕಿದಿಯೂರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT