ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ನಾಮಪತ್ರಗಳು ಕ್ರಮಬದ್ಧ

Published 6 ಏಪ್ರಿಲ್ 2024, 5:45 IST
Last Updated 6 ಏಪ್ರಿಲ್ 2024, 5:45 IST
ಅಕ್ಷರ ಗಾತ್ರ

ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಯಕೆ ಹೊತ್ತು ದಕ್ಷಿಣ ಕನ್ನಡ ಕ್ಷೇತ್ರದಿಂದ ಸಲ್ಲಿಕೆಯಾಗಿದ್ದ ನಾಮಪತ್ರಗಳ ಪೈಕಿ 10 ಅಭ್ಯರ್ಥಿಗಳ ನಾಮಪತ್ರಗಳು ಅಂಗೀಕಾರಗೊಂಡಿವೆ. ಪಕ್ಷೇತರ ಅಭ್ಯರ್ಥಿಗಳ ಪೈಕಿ ಒಬ್ಬರ ನಾಮಪತ್ರ ತಿರಸ್ಕಾರಗೊಂಡಿದೆ.

ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಘಟಕದಲ್ಲಿ ನಾಮಪತ್ರಗಳ ಪರಿಶಿಲನೆ ಶುಕ್ರವಾರ ನಡೆಯಿತು. ಮೂವರು ಪಕ್ಷೇತರ ಅಭ್ಯರ್ಥಿಗಳ ಪೈಕಿ ಫ್ರಾನ್ಸಿಸ್‌ ಲ್ಯಾನ್ಸಿ ಮಾಡ್ತಾ ಅವರು ಸಲ್ಲಿಸಿದ್ದ ನಾಮಪತ್ರ ಸಮರ್ಪಕವಾಗಿರದ ಕಾರಣ ತಿರಸ್ಕರಿಸಲಾಯಿತು.

ಬಿಜೆಪಿಯ ಬೃಜೇಶ್‌ ಚೌಟ, ಕಾಂಗ್ರೆಸ್‌ನ ಪದ್ಮರಾಜ್ ಆರ್‌, ಬಹುಜನ ಸಮಾಜ ಪಕ್ಷದ ಕಾಂತಪ್ಪ ಅಲಂಗಾರ್, ಕರ್ನಾಟಕ ರಾಷ್ಟ್ರ ಸಮಿತಿಯ ರಂಜಿನಿ ಎಂ, ಉತ್ತಮ ಪ್ರಜಾಕೀಯ ಪಕ್ಷದ ಕೆ.ಇ.ಮನೋಹರ, ಕರುನಾಡ ಸೇವಕ ಪಕ್ಷದ ದುರ್ಗಾಪ್ರಸಾದ್‌, ಸಂಯುಕ್ತ ಜನತಾದಳದ ಸುಪ್ರೀತ್‌ ಕುಮಾರ್‌ ಪೂಜಾರಿ, ಪಕ್ಷೇತರರಾದ ಮ್ಯಾಕ್ಸಿಂ ಪಿಂಟೊ, ದೀಪಕ್ ರಾಜೇಶ್ ಕುವೆಲ್ಲೊ ಹಾಗೂ ಸತೀಶ್ ಬೂಡುಮಕ್ಕಿ ಅವರ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

ನಾಮಪತ್ರ ಹಿಂಪಡೆಯಲು ಇದೇ 8 ಕೊನೆಯ ದಿನವಾಗಿದ್ದು ಕಣದಲ್ಲಿ ಎಷ್ಟು ಮಂದಿ ಉಳಿದುಕೊಳ್ಳುತ್ತಾರೆ ಎಂಬ ಕುತೂಹಲ ಗರಿಗೆದರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT