ಶುಕ್ರವಾರ, ನವೆಂಬರ್ 22, 2019
20 °C
ಪೋಕ್ಸೊ ಪ್ರಕರಣ ಜಾಸ್ತಿ: ಎಸ್ಪಿ ಜೇಮ್ಸ್ ಜೋಸೆಫ್

ಕಾಸರಗೋಡು: ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚು

Published:
Updated:
Prajavani

ಕಾಸರಗೋಡು: ‘ಜಿಲ್ಲೆಯಲ್ಲಿ ದಾಖಲಾಗುವ ಲೈಂಗಿಕ ದೌರ್ಜನ್ಯಗಳಲ್ಲಿ ಶೇ 90 ಪೋಕ್ಸೊ ಪ್ರಕರಣಗಳಾಗಿವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್ ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನೇತೃತ್ವದಲ್ಲಿ ಆಯ್ದ 40 ಶಾಲೆಗಳ ಮಕ್ಕಳಿಗಾಗಿ  ವಿದ್ಯಾನಗರದ ಚಿನ್ಮಯ ವಿದ್ಯಾಲಯದಲ್ಲಿ ಗುರುವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮಕ್ಕಳ ಹಕ್ಕು ಸಂರಕ್ಷಣೆ ಕಾಯ್ದೆಯ ಬಗ್ಗೆ ಆಯ್ದ 40 ಶಾಲೆಗಳ ಮಕ್ಕಳಿಗಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು
ಮಾತನಾಡಿರು.

'ಲೈಂಗಿಕ ಶೋಷಣೆಗೊಳಗಾಗುತ್ತಿರುವವರಲ್ಲಿ ಅಧಿಕ ಮಂದಿ ಗಂಡುಮಕ್ಕಳು. ಮಕ್ಕಳ ಮೇಲಿನ ದೌರ್ಜನ್ಯ ವಿರುದ್ಧ ವ್ಯಾಪಕ ಜಾಗೃತಿ ಮೂಡಿಸಬೇಕು. ಆರೋಪಿಗಳು ಕಾನೂನಿಂದ ತಪ್ಪಿಸದಂತೆ ನೋಡುವ ಜವಾಬ್ದಾರಿ ಸಾರ್ವಜನಿಕರು ನಿಗಾ ವಹಿಸಬೇಕು'ಎಂದವರು ಹೇಳಿದರು.

ಜಾಗೃತ ಸಮಾಜ: ' ಮಕ್ಕಳ  ಮೇಲೆ ದೌರ್ಜನ್ಯ ನಡೆಸುವವರಿಗೆ ಕಠಿಣ ಶಿಕ್ಷೆ ಒದಗಿಸಬೇಕಾಗಿದೆ ' ಎಂದು ಜಿಲ್ಲಾ ನ್ಯಾಯಾಧೀಶ  ಡಿ.ಅಜಿತ್ ಕುಮಾರ್ ಹೇಳಿದರು. 'ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಯಲು ಪೋಷಕರು, ಶಿಕ್ಷಕರು, ಸಾರ್ವಜನಿಕರ ಸಹಕಾರ ಅಗತ್ಯ' ಎಂದರು.

ಸಿಜೆಎಂ ನ್ಯಾಯಾಧೀಶ ಮುಜೀಬ್ ರಹಮಾನ್  ಮಾಹಿತಿ ನೀಡಿದರು. ನ್ಯಾಯಾಧೀಶ ಜತೆ ವಿದ್ಯಾರ್ಥಿಗಳು ಸಂವಾದ ನಡೆಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ದೇವಿದಾಸ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಪಿ.ಪಿ.ಶ್ಯಾಮಲಾದೇವಿ, ಕಾಸರಗೋಡು  ವಕೀಲರ ಸಂಘದ ಅಧ್ಯಕ್ಷ ಎ.ಸಿ.ಅಶೋಕ್ ಕುಮಾರ್, ಅಬಕಾರಿ ವಿಶೇಷದಳ ಸಿ.ಐ.ಪಿ.ಪಿ.ಜನಾರ್ದನನ್, ಜಿಲ್ಲಾಮಕ್ಕಳ ಸಂರಕ್ಷಣೆ ಅಧಿಕಾರಿ ಸಿ.ಎ.ಬಿಂದು, ಚೈಲ್ಡ್ ಲೈನ್ ಕೌನ್ಸಿಲರ್ ಆಯಿಷತ್ ಅಫೀದ, ಡಿ.ಎಲ್.ಎಸ್.ಎ. ವಿಭಾಗ ಅಧಿಕಾರಿ ಕೆ.ದಿನೇಶ,  ಪ್ರಾಂಶುಪಾಲ ಪುಷ್ಪರಾಜ್  ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)