ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಪ್ಪಿನಂಗಡಿ | ನಿರ್ಮಾಣವಾಗದ ಚರಂಡಿ: ಮನೆ, ಅಂಗಡಿಗೆ ನುಗ್ಗಿದ ಮಳೆ ನೀರು

Published 13 ಮೇ 2024, 13:35 IST
Last Updated 13 ಮೇ 2024, 13:35 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿ 34-ನೆಕ್ಕಿಲಾಡಿಯಲ್ಲಿ ಮಣ್ಣು ಹಾಕಿ ನಿರ್ಮಿಸಿದ್ದ ಸರ್ವಿಸ್‌ ರಸ್ತೆಬದಿ ಚರಂಡಿ, ಮೋರಿ ನಿರ್ಮಾಣವಾಗದೆ ಇರುವುದರಿಂದ ಮಳೆಯ ಕೆಸರು ನೀರು ಮನೆ, ಅಂಗಡಿ, ಗ್ಯಾರೇಜ್, ಮಳಿಗೆಗಳಿಗೆ ನುಗ್ಗಿ ಹಾನಿಯಾಗಿದೆ.

ಭಾನುವಾರ ಸಂಜೆ ಮತ್ತು ಸೋಮವಾರ ನಸುಕಿನಲ್ಲಿ ಸುರಿದ ಭಾರಿ ಮಳೆ ನೀರು ಸರ್ವಿಸ್‌ ರಸ್ತೆ ಮೂಲಕ ಹರಿದು 34-ನೆಕ್ಕಿಲಾಡಿಯ ಜಯಂತಿ ಎಂಬುವರ ಮನೆಯೊಳಗೆ ಮತ್ತು ದನದ ಹಟ್ಟಿಯೊಳಗೆ ನುಗ್ಗಿದೆ. ಭಾರಿ ಗಾಳಿಗೆ ಜಯಂತಿ ಅವರ ಮನೆಯ ಚಾವಣಿಯ ಹೆಂಚು ಹಾರಿ ಹೋಗಿದ್ದು, ಸಾವಿರಾರು ರೂಪಾಯಿ ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ.

ಹೆದ್ದಾರಿಯ ಇನ್ನೊಂದು ಪಾರ್ಶ್ವದಲ್ಲಿ ಜಗಜೀವನ್ ರೈ ಎಂಬುವರ ಮನೆಯೊಳಗೆ ನೀರು ನುಗ್ಗಿದ್ದು, ಮನೆಯ ಸುತ್ತ ಕೆಸರು ತುಂಬಿದೆ. ಕಾರ್ ಕ್ಲಬ್, ಪಾಂಡೇಲ್ ಸ್ಟೀಲ್ ಸಂಸ್ಥೆಯ ಒಳಗೂ ನೀರು ನುಗ್ಗಿದೆ. ಸಮಸ್ಯೆಯನ್ನು ಸರಿಪಡಿಸುವಂತೆ ವರ್ತಕರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT