ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೈವನಿಷ್ಠೆ, ಸ್ವಾಮಿನಿಷ್ಠೆ ಇದ್ದರೆ ಭಗವಂತನ ಅನುಗ್ರಹ

ದೆಯ್ಯೆರೆ ಮಾಡ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಸಂಜೀವ ಮಠಂದೂರು
Published 24 ಫೆಬ್ರುವರಿ 2024, 6:39 IST
Last Updated 24 ಫೆಬ್ರುವರಿ 2024, 6:39 IST
ಅಕ್ಷರ ಗಾತ್ರ

ಪುತ್ತೂರು: ದೈವನಿಷ್ಠೆ ಮತ್ತು ಸ್ವಾಮಿ ನಿಷ್ಠೆ ಇದ್ದರೆ ಭಗವಂತನನ್ನು ಕಾಣಲು ಮತ್ತು ಭಗವಂತನ ಅನುಗ್ರಹ ಪಡೆಯಲು ಸಾಧ್ಯ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಿರುವಂತೆ ಹಳ್ಳಿ ಹಳ್ಳಿಯಲ್ಲೂ ರಾಮ ಭಕ್ತಿ ಮತ್ತು ದೈವ ಭಕ್ತಿ ಮೂಡಿ ಬರುತ್ತಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.

ಪುತ್ತೂರು ನಗರದ ಹೊರವಲಯದ ಬನ್ನೂರು ದೈಯ್ಯೆರೆ ಮಾಡ ನಡಿಮಾರು ಮತ್ತು ಆನೆಮಜಲು ನ್ಯಾಯಾಲಯದ ಸಂಕೀರ್ಣದ ಬಳಿಯ ಇಷ್ಟದೇವತೆ, ಅಣ್ಣಪ್ಪ ಪಂಜುರ್ಲಿ, ರಕ್ತೇಶ್ವರಿ ಸಾನ್ನಿಧ್ಯದಲ್ಲಿ ನಡೆದ ಪುನರ್‌ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಮಾತನಾಡಿ, ಧಾರ್ಮಿಕ ಕೇಂದ್ರಗಳು ಕೇವಲ ಪೂಜೆ ಪುನಸ್ಕಾರಕ್ಕೆ ಸೀಮಿತವಾಗದೆ ಸಾಮಾಜಿಕ ಪರಿವರ್ತನೆಯ ಕೇಂದ್ರವಾಗಿ ಮೂಡಿ ಬರಬೇಕು ಎಂದರು.

ಬನ್ನೂರು ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ರಾಜಶೇಖರ್ ಜೈನ್ ನೀರ್ಪಾಜೆ ಮಾತನಾಡಿದರು.

ಬನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಎನ್., ನಗರಸಭೆ ಸದಸ್ಯರಾದ ಗೌರಿ ಬನ್ನೂರು, ಮೋಹಿನಿ ವಿಶ್ವನಾಥ್, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಮೌನೀಶ್ ಕುಲಾಲ್ ಭಾಗವಹಿಸಿದ್ದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ.ವಿ.ನಾರಾಯಣ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಗೌಡ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.

ಎ.ವಿ.ನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವನಾಥ ಗೌಡ ಬನ್ನೂರು ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರತ್ನಾಕರ ರೈ ಕೆಳಗಿನಮನೆ ವಂದಿಸಿದರು. ಹರಿಪ್ರಸಾದ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT