ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಕಿ | ಸೇಂಟ್ ಅಲೋಶಿಯಸ್‌, ನಿಟ್ಟೆ ಕಾಲೇಜು ಫೈನಲ್‌ಗೆ

ದಕ್ಷಿಣ ಕನ್ನಡ ಆಯೋಜಿಸಿರುವ ಜಿಲ್ಲಾ ಮಟ್ಟದ ಲೀಗ್‌: ಫೀನಿಕ್ಸ್‌ಗೆ ವೀರೋಚಿತ ಸೋಲು
Published 7 ಏಪ್ರಿಲ್ 2024, 4:24 IST
Last Updated 7 ಏಪ್ರಿಲ್ 2024, 4:24 IST
ಅಕ್ಷರ ಗಾತ್ರ

ಮಂಗಳೂರು: ನಿಟ್ಟೆಯ ಎನ್‌ಎಂಎಎಂಐಟಿ ಮತ್ತು ನಗರದ ಸೇಂಟ್ ಅಲೋಶಿಯಸ್ ಪದವಿ ಕಾಲೇಜು ತಂಡಗಳು ಆಯೋಜಿಸಿರುವ ಜಿಲ್ಲಾ ಮಟ್ಟದ ಹಾಕಿ ಲೀಗ್‌ನ ಪುರುಷರ ವಿಭಾಗದ ಫೈನಲ್ ಪ್ರವೇಶಿಸಿದವು.

ಅತ್ತಾವರದ ಕೆಎಂಸಿ ಮರೀನಾ ಮೈದಾನದಲ್ಲಿ ನಡೆಯುತ್ತಿರುವ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೇಂಟ್ ಅಲೋಶಿಯಸ್ ತಂಡ  ಹಳೆಯಂಗಡಿಯ ಜಿಎಫ್‌ಜಿಸಿ ಕಾಲೇಜು ವಿರುದ್ಧ 4–1ರಲ್ಲಿ ಮತ್ತು ನಿಟ್ಟೆ ತಂಡ ಬಜಪೆಯ ಫೀನಿಕ್ಸ್‌ ಹಾಕಿ ಕ್ಲಬ್‌ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ (5–4)ಜಯ ಗಳಿಸಿತು. 

ಅಲೋಶಿಯಸ್ ಪರವಾಗಿ ಕಾವೇರಪ್ಪ (5, 15ನೇ ನಿಮಿಷ), ದಿವಿನ್ ಬಿದ್ದಯ್ಯ (20, 47ನೇ ನಿ) ಮತ್ತು ತನಿಷ್ ತಮ್ಮಯ್ಯ (35ನೇ ನಿ) ಗೋಲು ಗಳಿಸಿದರೆ ಹಳೆಯಂಗಡಿ ಕಾಲೇಜು ತಂಡದ ಏಕೈಕ ಗೋಲು ಶಿವಕುಮಾರ್ (10ನೇ ನಿ) ಅವರಿಂದ ಮೂಡಿಬಂತು.

ನಿಟ್ಟೆ ಮತ್ತು ಫೀನಿಕ್ಸ್ ನಡುವಿನ ಪಂದ್ಯ ನಿಗದಿತ ಅವಧಿಯಲ್ಲಿ 1–1ರಲ್ಲಿ ಸಮ ಆಗಿತ್ತು. ಚರ್ಮಣ್ಣ 10ನೇ ನಿಮಿಷದಲ್ಲಿ ನಿಟ್ಟೆ ತಂಡಕ್ಕೆ ಮುನ್ನಡೆ ಗಳಿಸಿಕೊಟ್ಟರು. 31ನೇ ನಿಮಿಷದಲ್ಲಿ ಸಾಕ್ಷಾತ್ ಗಳಿಸಿದ ಗೋಲು ಪಂದ್ಯವನ್ನು ರೋಚಕ ಘಟ್ಟಕ್ಕೆ ತೆಗೆದುಕೊಂಡು ಹೋಯಿತು.

ಪುರುಷರ ವಿಭಾಗದಲ್ಲಿ 6 ತಂಡಗಳು ಮತ್ತು ಮಹಿಳೆಯರ ವಿಭಾಗದಲ್ಲಿ 3 ತಂಡಗಳು ಪಾಲ್ಗೊಂಡಿದ್ದು ಶನಿವಾರ ನಡೆದ ಇತರ ಪಂದ್ಯಗಳಲ್ಲಿ ಸೇಂಟ್ ಅಲೋಶಿಯಸ್ 15–0ಯಿಂದ ಜೋಯ್ಲ್ಯಾಂಡ್ ಹಾಕಿ ಕ್ಲಬ್‌ ವಿರುದ್ಧ, ಹಳೆಯಂಗಡಿಯ ಜಿಎಫ್‌ಜಿಸಿ 4–0ಯಿಂದ ಮಂಗಳೂರಿನ ಕೆಎಂಸಿ ವಿರುದ್ಧ, ಸೇಂಟ್ ಅಲೋಶಿಯಸ್‌ 4–0ಯಿಂದ ಫೀನಿಕ್ಸ್‌ ಹಾಕಿ ಕ್ಲಬ್‌ ವಿರುದ್ಧ, ನಿಟ್ಟೆ ಕಾಲೇಜು 2–0ಯಿಂದ ಕೆಎಂಸಿ ವಿರುದ್ಧ, ಫೀನಿಕ್ಸ್ ಹಾಕಿ ಕ್ಲಬ್‌ 3–0ಯಿಂದ ಜೋಯ್ಲ್ಯಾಂಡ್ ವಿರುದ್ಧ ಗೆಲುವು ಸಾಧಿಸಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT