ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಕೂಳೂರು: ಶ್ರೀಚಕ್ರ ಮಹಾಯಾಗ 31ರಂದು

Published 28 ಮಾರ್ಚ್ 2024, 4:44 IST
Last Updated 28 ಮಾರ್ಚ್ 2024, 4:44 IST
ಅಕ್ಷರ ಗಾತ್ರ

ಮಂಗಳೂರು: ಲೋಕಕಲ್ಯಾಣಾರ್ಥ ಇಲ್ಲಿನ ಓಂ ಶ್ರೀ ಮಠದ ನೇತೃತ್ವದಲ್ಲಿ ಶ್ರೀಚಕ್ರ ಮಹಾಯಾಗವನ್ನು (ಪಂಚಮಹಾ ಯಜ್ಞ) ಕೂಳೂರಿನ ಗೋಲ್ಡ್‌ ಫಿಂಚ್ ಸಿಟಿ ಮೈದಾನದಲ್ಲಿ ಇದೇ 31 ರಂದು ಏರ್ಪಡಿಸಲಾಗಿದೆ ಎಂದು ಅಖಿಲ ಭಾರತೀಯ ಸಂತ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ವಿದ್ಯಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ದೇಶದ ವಿವಿಧೆಡೆಯ ಯತಿವರ್ಯರ ಸಾನಿಧ್ಯದಲ್ಲಿ ಶಿವ ಶಕ್ತಿಯ ಐಕ್ಯ ರೂಪವಾದ ಶ್ರೀ ಚಕ್ರದ ಆರಾಧನೆ ನಡೆಯಲಿದೆ. ಶ್ರೀಚಕ್ರ ನವಾವರಣ ಪೂಜೆ ಹಾಗೂ ಯಾಗದ ಅಂಗವಾಗಿ ಅಂದು ಬೆಳಿಗ್ಗೆ 5ರಿಂದ ಗಣಹೋಮ, ರಾಮತಾರಕ ಹೋಮ, ರುದ್ರ ಹೋಮ, ಚಂಡಿಕಾ ಹೋಮ, ಸಾರ್ವಜನಿಕ ಶ್ರೀ ಲಲಿತಾ ಸಹಸ್ರನಾಮಾರ್ಚನೆ ನಡೆಯಲಿದೆ. ಎಲ್ಲಾ ಭಕ್ತರೂ ಹೋಮ ಸಂಕಲ್ಪ ಮಾಡಲು ಬೆಳಿಗ್ಗೆ 8ರಿಂದ ಅವಕಾಶವಿದೆ’ ಎಂದರು.

‘ಬೆಳಿಗ್ಗೆ 11.30 ಗೆ ಸಂತ ಸಮಾವೇಶ ನಡೆಯಲಿದೆ. ಮಧ್ಯಾಹ್ನ 1ಗಂಟೆಯಿಂದ ಸಾರ್ವಜನಿಕ ಅನ್ನದಾನ ನಡೆಯಲಿದೆ’ ಎಂದು ತಿಳಿಸಿದರು.

ಚಿಲಿಂಬಿಯ ಓಂಶ್ರೀ ಮಠದ ಮಾತಾಶ್ರೀ  ಶಿವ ಜ್ಞಾನಮಹಿ ಸರಸ್ವತಿ ಹಾಗೂ ಆಶಾ ಜಗದೀಶ್ ಭಾಗವಹಿಸಿದ್ದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT