ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಕೋಟೆಕಾರು ಮಠಕ್ಕೆ ಶೃಂಗೇರಿ ಶ್ರೀಗಳ ಭೇಟಿ ನಾಳೆ

Published 16 ಫೆಬ್ರುವರಿ 2024, 3:08 IST
Last Updated 16 ಫೆಬ್ರುವರಿ 2024, 3:08 IST
ಅಕ್ಷರ ಗಾತ್ರ

ಮಂಗಳೂರು: ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತಿ ಸ್ವಾಮೀಜಿ ಅಭಿವಂದನಾ ಕಾರ್ಯಕ್ರಮವು ಫೆ.17ರಂದು ಸಂಜೆ 5 ಗಂಟೆಗೆ ಕೋಟೆಕಾರಿನ ಶೃಂಗೇರಿ ಶಂಕರ ಮಠದಲ್ಲಿ ನಡೆಯಲಿದೆ ಎಂದು ಕೋಟೆಕಾರು ಶಾಖಾ ಮಠದ ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾವ ಹೇಳಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ ಪೂರ್ಣಕುಂಭದೊಂದಿಗೆ ಶ್ರೀಗಳನ್ನು ಸ್ವಾಗತಿಸಲಾಗುವುದು. ನಂತರ ನಡೆಯುವ ಅಭಿವಂದನಾ ಕಾರ್ಯಕ್ರಮದಲ್ಲಿ ಶೃಂಗೇರಿ ಶಾರದಾ ಪೀಠದ ಪ್ರಧಾನ ಸಲಹೆಗಾರ ವಿ. ಆರ್.ಗೌರಿಶಂಕರ, ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ಪಿ.ಎ. ಮುರಳಿ ಪಾಲ್ಗೊಳ್ಳುವರು. ವೇದಮೂರ್ತಿ ಹಿರಣ್ಯ ವೆಂಕಟೇಶ್ವರ ಭಟ್ ಬಾಯಾರು ಅಭಿವಂದನಾ ಭಾಷಣ ಮಾಡಲಿದ್ದಾರೆ. ನಂತರ ಶ್ರೀಗಳು ಆಶೀರ್ವಚನ ನೀಡುವರು ಎಂದರು.

ಶೃಂಗೇರಿ ಮಠದ ಉಡುಪಿ ಪ್ರಾಂತದ ಧರ್ಮಾಧಿಕಾರಿ ಎಸ್. ವಾಗೀಶ ಶಾಸ್ತ್ರಿ, ಪ್ರಮುಖರಾದ ಪ್ರದೀಪ ಕುಮಾರ್ ಪಂಜ, ಹರಿಕೃಷ್ಣ ಪುನರೂರು, ಕೆ.ಎಸ್. ಕಾರಂತ ಸಾಲಿಗ್ರಾಮ, ಪ್ರದೀಪ ಕುಮಾರ ಕಲ್ಕೂರ, ಅಜ್ಜಾವರ ಶಿವರಾವ್, ನಾ. ಮೊಗಸಾಲೆ ಕಾಂತಾವರ, ಕೆ. ದೇವರಾಜ್, ಕೀರ್ತನ್ ಕುಮಾರ್ ಲಾಡ್, ಕೆ.ಸಿ. ನಾಯ್ಕ್, ಮಹೇಶ್ ಕಜೆ ಬೆಂಗಳೂರು, ಬಿ.ಬಿ. ರವೀಂದ್ರನಾಥ ರೈ, ಚಂದ್ರಶೇಖರ ರಾವ್ ಬೊಕ್ಕಸ ಮೊದಲಾದವರು ಭಾಗವಹಿಸುವರು ಎಂದರು.

ನಂತರ ಶ್ರೀಗಳಿಂದ ಚಂದ್ರಮೌಳೀಶ್ವರ ಪೂಜೆ, ಫೆ. 18ರಂದು ಬೆಳಿಗ್ಗೆ 11 ಗಂಟೆಗೆ ಶ್ರೀಗಳ ಪಾದಪೂಜೆ, ಭಿಕ್ಷಾ ಕಾಣಿಕೆ ಸಮರ್ಪಣೆ, ಬಳಿಕ ಮಂತ್ರಾಕ್ಷತೆ ವಿತರಣೆ ನಡೆಯಲಿದೆ. ಸಂಜೆ 4.30ರ ವೇಳೆಗೆ ಜಗದ್ಗುರುಗಳು ನಿರ್ಗಮಿಸುವರು ಎಂದರು.

ಅಭಿವಂದನಾ ಸಮಿತಿ ಅಧ್ಯಕ್ಷ ಮಧುಸೂದನ ಆಯರ್, ಪ್ರಮುಖರಾದ ಸೀತಾರಾಮ ಕೊಪ್ಪಲು, ‌ದೇವದಾಸ ರೈ ಮೇನಾಲ, ಶಿವಪ್ರಸಾದ್ ಆಚಾರ್ಯ ಕೊಂಡಾಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT