ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಲವ್‌ ಜಿಹಾದ್ ತಡೆಗೆ ಸಹಾಯವಾಣಿ’

Published 30 ಮೇ 2024, 6:30 IST
Last Updated 30 ಮೇ 2024, 6:30 IST
ಅಕ್ಷರ ಗಾತ್ರ

ಮಂಗಳೂರು: ಲವ್ ಜಿಹಾದ್‌ ಪ್ರಕರಣಗಳಿಗೆ ಲಗಾಮು ಹಾಕುವ ಜೊತೆಗೆ ಹಿಂದೂ ಯುವತಿಯರ ರಕ್ಷಣೆ ಮಾಡುವ ಉದ್ದೇಶದಿಂದ ಶ್ರೀರಾಮ ಸೇನೆ ವತಿಯಿಂದ ಸಹಾಯವಾಣಿ ಆರಂಭಿಸಲಾಗಿದೆ ಎಂದು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್ ಹೇಳಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲವ್ ಜಿಹಾದ್‌ ಪ್ರಕರಣಗಳಿಂದ ಹಿಂದೂ ಯುವತಿಯರನ್ನು ರಕ್ಷಿಸಬೇಕಾಗಿದೆ. ಯಾರ ಬಳಿಯೂ ಹೇಳಿಕೊಳ್ಳಲಾಗದೆ ತೊಂದರೆ ಅನುಭವಿಸುತ್ತಿರುವ ಸಹೋದರಿಯರು, ಅವರ ತಾಯಂದಿರು 90904 43444 ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದು. ಸತ್ಯಾಸತ್ಯತೆ ಪರಿಶೀಲಿಸಿ, ಶ್ರೀರಾಮ ಸೇನೆ ಅವರಿಗೆ ನೆರವಾಗಲಿದೆ’ ಎಂದರು.

ಬೆಂಗಳೂರು, ಕಲಬುರಗಿ, ಬಾಗಲಕೋಟೆ, ದಾವಣಗೆರೆ, ಹುಬ್ಬಳ್ಳಿ–ಧಾರವಾಡ, ಮಂಗಳೂರು ಹೀಗೆ ಆರು ಕಡೆಗಳಲ್ಲಿ ಸಹಾಯವಾಣಿ ಉದ್ಘಾಟನೆಯಾಗಿದೆ. ರಾಜ್ಯದ ಯಾವುದೇ ಭಾಗದ ಯುವತಿಯರು ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳಬಹುದು. ವಕೀಲರು, ಮಾಜಿ ಪೊಲೀಸ್ ಅಧಿಕಾರಿಗಳು, ಕೌನ್ಸೆಲಿಂಗ್‌ ನಡೆಸುವವರು ತಂಡದಲ್ಲಿದ್ದು, ತೊಂದರೆಗೊಳಗಾದ ಯುವತಿಯರಿಗೆ ಧೈರ್ಯ ತುಂಬುತ್ತಾರೆ. ಸಂಘಟನೆಯು ಕಾನೂನು ಮೀರಿ ಯಾವುದೇ ಕೆಲಸ ಮಾಡುವುದಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಹಿಂದೂ ಯುವತಿಯರಿಗೆ ಸಹಾಯ ಮಾಡುತ್ತದೆ ಎಂದು ಹೇಳಿದರು.

ಪ್ರೀತಿ, ಪ್ರೇಮದ ಹೆಸರಿನಲ್ಲಿ ಹಿಂದೂ ಯುವತಿಯರನ್ನು ವಂಚಿಸಲಾಗುತ್ತಿದೆ. ಒಂದು ವರ್ಷದಲ್ಲಿ ಸುಮಾರು 14 ಪ್ರಕರಣಗಳನ್ನು ಭೇದಿಸಿ ಹಿಂದೂ ಯುವತಿಯರ ರಕ್ಷಣೆ ಮಾಡಲಾಗಿದೆ. ಒಪಿ ಇಂಡಿಯಾ ಎನ್ನುವ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಉತ್ತರ ಭಾರತದಲ್ಲಿ 2022–23ರಲ್ಲಿ 153 ಹಿಂದೂ ಯುವತಿಯರ ಬರ್ಬರ ಕೊಲೆಯಾಗಿದೆ. ಇವುಗಳಲ್ಲಿ ಶೇ 27.5ರಷ್ಟು ಬಾಲಕಿಯರು, ಯುವತಿಯರು ಶೇ 72.5, ಹಿಂದುಳಿದ ಜಾತಿಗಳ ಯುವತಿಯರು ಶೇ 18ರಷ್ಟು ಇದ್ದಾರೆ. ಮುಸ್ಲಿಂ ಗುರುತು ಮುಚ್ಚಿಟ್ಟು, ಪ್ರೀತಿಯಲ್ಲಿ ಹೆಸರಿನಲ್ಲಿ ಮೋಸ ಮಾಡಿರುವುದು ಶೇ 62.1ರಷ್ಟಿದೆ ಎಂದು ಹೇಳಿದರು.

‘ಹಿಂದೂ ಯುವತಿಯರು, ಮಹಿಳೆಯರ ಮೇಲೆ ವ್ಯವಸ್ಥಿತವಾಗಿ ಪ್ರೀತಿ, ಪ್ರೇಮದ ಹೆಸರಿನಲ್ಲಿ ಇಸ್ಲಾಂನ ಕುತಂತ್ರದಿಂದ ಅತ್ಯಾಚಾರ, ಮತಾಂತರ ಮಾಡಲಾಗುತ್ತಿದೆ. ಇತಿಹಾಸದ ಕಾಲದಿಂದಲೂ ಇಸ್ಲಾಂನ ಕ್ರೌರ್ಯ ನಿರಂತರವಾಗಿ ನಡೆಯುತ್ತಲಿದೆ. ಇಂತಹ ಕ್ರೂರಿಗಳಿಗೆ ತಕ್ಕ ಉತ್ತರ ಕೊಡಲು ಹಿಂದೂ ಯುವತಿಯರು ಮತ್ತು ಮಹಿಳೆಯರಿಗೆ ಶ್ರೀ ರಾಮ ಸೇನಾದಿಂದ ಅಗತ್ಯ ತರಬೇತಿ ನೀಡಲಾಗುವುದು’ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆ ಪ್ರಮುಖರಾದ ಮಧುಸೂದನ್ ಉರ್ವಸ್ಟೋರ್, ಜಯರಾಮ್ ಅಂಬೆಕಲ್ಲು, ಹೇಮಂತ ಜಾನಕೆರೆ, ಅರುಣ್ ಕದ್ರಿ, ಸುದರ್ಶನ್ ಪೂಜಾರೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT