ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ಪುರಾಣ ಪುರುಷರ ಬಗ್ಗೆ ಉಪಾನ್ಯಾಸ

Published 18 ಡಿಸೆಂಬರ್ 2023, 13:20 IST
Last Updated 18 ಡಿಸೆಂಬರ್ 2023, 13:20 IST
ಅಕ್ಷರ ಗಾತ್ರ

ಮಂಗಳೂರು: ಇಲ್ಲಿನ ಆಶೋಕನಗರದಲ್ಲಿರುವ ಶ್ರೀಕೃಷ್ಣ ಮಂದಿರದ ಬೆಳ್ಳಿ ಹಬ್ಬದ ಪ್ರಯುಕ್ತ ನಡೆಯುತ್ತಿರುವ ತಿಂಗಳ ಕಾರ್ಯಕ್ರಮದಲ್ಲಿ, ಪುರಾಣ ಪ್ರಸಿದ್ಧ ಪುರುಷರ ಬಗ್ಗೆ ಉಪಾನ್ಯಾಸ ಮಾಲಿಕೆ ನಡೆಯಿತು.

ಮಾಲಿಕೆಯ ಮೊದಲ ಕಾರ್ಯಕ್ರಮದಲ್ಲಿ ವಿದ್ವಾಂಸ ಎಂ. ಪ್ರಭಾಕರ ಜೋಶಿ ಅವರು ಮಹಾಭಾರತದ ಪ್ರಮುಖ ಪಾತ್ರ ಭೀಷ್ಮ ಬಗ್ಗೆ ಉಪಾನ್ಯಾಸ ನೀಡಿದರು. ನೇಪಾಳ ಪಶುಪತಿ ದೇವಸ್ಥಾನದ ಪ್ರಧಾನ ಆರ್ಚಕ ಶ್ರಿರಾಮ ಕಾರಂತ ಅಧ್ಯಕ್ಷತೆ ವಹಿಸಿದ್ದರು.

ಯಕ್ಷಗಾನ ಪ್ರಸಂಗಕರ್ತ ನಿತ್ಯಾನಂದ ಕಾರಂತ, ಮಂಗಳೂರು ಸ್ಮಾರ್ಟ್ ಸಿಟಿ ತಾಂತ್ರಿಕ ಮಹಾಪ್ರಭಂಧಕ ಅರುಣ ಪ್ರಭಾ ಮುಖ್ಯ ಅತಿಥಿಯಾಗಿದ್ದರು. ಮಾಧವಾಚಾರ್ ಸ್ವಾಗತಿಸಿದರು. ಲಲಿತಾ ಆರ್. ರಾವ್ ನಿರೂಪಿಸಿದರು. ವಿಶಾಲ ರಾವ್ ವಂದಿಸಿದರು.

ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ವಕೀಲ ಎಂ. ಚಿದಾನಂದ ಕೆದಿಲಾಯ 2024ರ ದಿನದರ್ಶಿನಿ ಬಿಡುಗಡೆಗೊಳಿಸಿದರು.

ಇನ್ನೊಂದು ಕಾರ್ಯಕ್ರಮದಲ್ಲಿ ಶ್ರೀಕೃಷ್ಣನ ಬಗ್ಗೆ ರಾಘವೇಂದ್ರ ರಾವ್ ಪಡುಬಿದ್ರಿ ಉಪನ್ಯಾಸ ನೀಡಿದರು. ಚಿತ್ರಾಪುರ ಗೋಪಾಲಕೃಷ್ಣ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕಗ್ಗಿ ಶ್ರೀನಿವಾಸ ಆಚಾರ್ಯ, ರಾಮದಾಸ್ ರಾವ್ ಮತ್ತು ಕೃಷ್ಣಮೂರ್ತಿ ರಾವ್ ವೇದಿಕೆಯಲ್ಲಿದ್ದರು. ಮುರಳೀಧರ ಸೋಮಯಾಜಿ ಸ್ವಾಗತಿಸಿದರು. ಗಣೇಶ್ ರಾವ್ ವಂದಿಸಿದರು. ನಳಿನಿ ಮೋಹನ್ ಕಾರ್ಯಕ್ರಮ ನಿರೂಪಿಸಿದರು.

ಅರ್ಥದಾರಿ ವಿದ್ವಾನ್ ಹಿರಣ್ಯ ವೆಂಕಟೇಶ್ ಭಟ್ ವೇದವ್ಯಾಸರ ಕುರಿತು ಉಪಾನ್ಯಾಸ ನೀಡಿದರು. ವೇದಮೂರ್ತಿ ಸುಬ್ರಹ್ಮಣ್ಯ ಮೂಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಸುಬ್ರಾಯ ಎಡಪಾಡಿತ್ತಾಯ ಕೆ. ವೆಂಕಟೇಶ್ ರಾವ್ ಇದ್ದರು. ವಿ. ರಾವ್ ಸ್ವಾಗತಿಸಿದರು. ಗಾಯತ್ರಿ ಬಿ.ಎಸ್. ನಿರೂಪಿಸಿದರು. ವಾದಿರಾಜ ಆಚಾರ್ ವಂದಿಸಿದರು.

ಮೂರನೇ ದಿನದ ಕಾರ್ಯಕ್ರಮದಲ್ಲಿ ಅರ್ಥದಾರಿ, ಉಜಿರೆಯ ಅಶೋಕ ಭಟ್ ವಿದುರನ ಬಗ್ಗೆ ಉಪಾನ್ಯಾಸ ನೀಡಿದರು. ವಿನೋದ್ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಕೆನರಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಜಿ.ಕೆ. ಭಟ್ ಸೇರಾಜೆ, ಉದ್ಯಮಿ ಟಿ. ರಾಘವೇಂದ್ರ ರಾವ್ ಭಾಗವಹಿಸಿದ್ದರು. ಉದಯ ಕುಮಾರಿ ನಿರೂಪಿಸಿದರು. ವಾಣಿ ವಾದಿರಾಜ ಆಚಾರ್ ವಂದಿಸಿದರು. ಸಾವಿತ್ರಿ ರಾವ್ ಸ್ವಾಗತಿಸಿದರು.

ಡಿ.30ರಂದು ವೈದಿಕ ವಿದ್ವಾಂಸ ವೇದಮೂರ್ತಿ ವಾದಿರಾಜ ಉಪಾಧ್ಯಾಯ, ಕೊಲೆಕಾಡಿ ಅವರು ದ್ರೌಪದಿ ಬಗ್ಗೆ ಮತ್ತು ಡಿ. 31ರಂದು ವಿದ್ವಾಂಸ ಪಂಜ ಭಾಸ್ಕರ ಭಟ್ ಅವರು ಹನುಮಂತನ ಬಗ್ಗೆ ಉಪಾನ್ಯಾಸ ನೀಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT