‘ಸಂಸ್ಕೃತಿ ಉಳಿವಿಗೆ ಕೆಸರು ಕ್ರೀಡೆ’

7
ಕೆಸರ್ ಕಂಡೊಡು ಆಟಿದ ಒಂಜಿ ದಿನತ್ತ ಕ್ರೀಡಾಕೂಟ

‘ಸಂಸ್ಕೃತಿ ಉಳಿವಿಗೆ ಕೆಸರು ಕ್ರೀಡೆ’

Published:
Updated:
Deccan Herald

ವಿಟ್ಲ: ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ತುಳುನಾಡ ಫ್ರೆಂಡ್ಸ್ ವತಿಯಿಂದ ‘ಕೆಸರ್ ಕಂಡೊಡು ಆಟಿದ ಒಂಜಿ ದಿನತ್ತ ಕ್ರೀಡಾಕೂಟ’ ಕುಂಡಡ್ಕ ಮಾಗಣಿ ಮನೆಯ ಕಂಬಳ ಗದ್ದೆಯಲ್ಲಿ ಭಾನುವಾರ ನಡೆಯಿತು.

ಕಾರ್ಯಕ್ರಮವನ್ನು ಪಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ವಿಟ್ಲ ಅರಮನೆಯ ಕೃಷ್ಣಯ್ಯ ಕೆ. ಅವರು ಹಿಂದಿನ ಕಾಲದಲ್ಲಿ ಗ್ರಾಮಸ್ಥರು ಎಲ್ಲಾ ಸೇರಿ ತುಳುನಾಡಿನ ವಿವಿಧ ಬೇಸಾಯಗಳನ್ನು ನಡೆಸಿಕೊಂಡು ಬರುತ್ತಿದ್ದರು. ಹಿಂದೆ ಜನರು ಪ್ರಕೃತಿಯನ್ನು ಪೂಜಿಸುತ್ತಿದ್ದರು. ಆದರೆ ಇಂದು ಅವುಗಳು ಮರೆಯಾಗುತ್ತಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಮತ್ತೆ ತುಳು ಸಂಸ್ಕೃತಿಯನ್ನು ಉಳಿಸುವ ಕಾರ್ಯಗಳು ನಡೆಯುತ್ತಿದೆ’ ಎಂದರು.

ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ವೇಣುಗೋಪಾಲ ಶೆಟ್ಟಿ ಮರುವಾಳ ಮಾತನಾಡಿ ‘ಇಂದು ಯುವ ಜನತೆ ಸಾಮಾಜಿಕ ಜಾಲತಾಣಗಳಿಗೆ ಹೆಚ್ಚು ಮಾರು ಹೋಗುತ್ತಿದ್ದು, ತುಳು ಸಂಸ್ಕೃತಿ ಆಚಾರ-ವಿಚಾರಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮುಂದಿನ ಪೀಳಿಗೆಗೂ ತುಳು ಸಂಸ್ಕೃತಿ ವಿಸ್ತರಿಸಲು ಸಾಧ್ಯವಿದೆ’ ಎಂದರು.

ತುಳುನಾಡಿನ ಜನಪ್ರಿಯ ಕ್ರೀಡೆಗಳಾದ ನಿಧಿ ಶೋಧನೆ, ಹಗ್ಗಜಗ್ಗಾಟ, ಕಬಡ್ಡಿ, ಪಿರಾಮಿಡ್ ರಚನೆ ಮೂಲಕ ಮಡಿಕೆ ಒಡೆಯುವುದು. ಕೆಸರುಗದ್ದೆ ಓಟ, ಮಡಿಕೆ ಒಡೆಯುವುದು. ಹಾಳೆಯಲ್ಲಿ ಎಳೆಯುವುದು, ಲಿಂಬೆ ಚಮಚ ಓಟ, ತೆಂಗಿನಕಾಯಿ ಸೀಳುವುದು ಮೊದಲಾದ ಸ್ಪರ್ಧೆಗಳು ನಡೆದವು. ನಿಧಿ ಶೋಧ ಸ್ಪರ್ಧೆಯಲ್ಲಿ 10 ಬಹುಮಾನಗಳನ್ನು ನೀಡಲಾಯಿತು. ಮಕ್ಕಳು ಹಾಗೂ ಮಹಿಳೆಯರು ನಿಧಿಶೋಧದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವಿಟ್ಲ ಸೀಮೆಯ ಅಧ್ಯಕ್ಷ ವೆಂಕಟೇಶ್ವರ್ ಭಟ್, ಜೀರ್ಣೋದ್ಧಾರ ಸಮಿತಿ ಜತೆ ಕಾರ್ಯದಶರ್ಿ ರವೀಶ ಶೆಟ್ಟಿ ಪಿಲಿಂಜ, ಸಂಘಟನಾ ಕಾರ್ಯದರ್ಶಿದಯಾನಂದ ಉಜಿರೆಮಾರ್, ವಿಟ್ಲ ಮುಡ್ನೂರು ಗ್ರಾಮ ಪಂಚಾಯಿತಿ ಸದಸ್ಯ ಯತೀಶ್ ಬೇರಿಕೆ, ಅಬೀರಿ ಅತೀಕಾರಬೈಲು ಯುವ ಕೇಸರಿಯ ಅಧ್ಯಕ್ಷ ಪದ್ಮನಾಭ ಶೆಟ್ಟಿ, ತುಳುನಾಡ ಫ್ರೆಂಡ್ಸ್‌ನ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಬರೆ, ದಿವಕರ ಶೆಟ್ಟಿ, ನಾರಾಯಣ ಗೌಡ ಓಟೆಮನೆ, ಉಮೇಶ್ ಗೌಡ, ಪ್ರಶಾಂತ್ ಗೌಡ, ದಿನೇಶ್ ಕೊಲ್ಯ, ಸುಧಾಕರ ಶೆಟ್ಟಿ, ಅಶೋಕ, ಸುಂದರ ಪೂಜಾರಿ, ಮನೋಜ್, ವಿಠಲ ಪೂಜಾರಿ ಅತಿಕಾರಬೈಲು, ನಾಗೇಶ್ ಕುಂಡಡ್ಕ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !