ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರು | ಬೋರ್‌ವೆಲ್‌ ವಾಹನಗಳ ಮೇಲೆ ಕಲ್ಲುತೂರಾಟ

Published 28 ಮೇ 2024, 15:25 IST
Last Updated 28 ಮೇ 2024, 15:25 IST
ಅಕ್ಷರ ಗಾತ್ರ

ಪುತ್ತೂರು: ಪುತ್ತೂರಿನ ಬಿಂದು ಸಂಸ್ಥೆಯಲ್ಲಿ ಹಳೆಯ ಕೊಳವೆಬಾವಿಯನ್ನು ಶುದ್ಧೀಕರಿಸುತ್ತಿದ್ದ ವೇಳೆ ಬೋರ್‌ವೆಲ್‌ ವಾಹನಗಳ ಮೇಲೆ ಎಸ್‌ಡಿಪಿಐ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದ್ದು, ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ನರಿಮೊಗರು ಗ್ರಾಮದ ಪುರುಷರಕಟ್ಟೆಯಲ್ಲಿರುವ ಸಾಫ್ಟ್ ಡ್ರಿಂಕ್ಸ್ ಪ್ಯಾಕ್ಟರಿ ಬಿಂದು ಸಂಸ್ಥೆಯಲ್ಲಿ ಹಳೆಯ ಕೊಳವೆಬಾವಿಗಳನ್ನು ಶುದ್ಧೀಕರಿಸುತ್ತಿದ್ದ ವೇಳೆ ಸ್ಥಳೀಯ ಎಸ್‌ಡಿಪಿಐ ಕಾರ್ಯಕರ್ತರೆನ್ನಲಾದ ಸಮದ್ ಮತ್ತು ಸಲೀಂ ಎಂಬುವರು ಸಂಸ್ಥೆಯ ಆವರಣದೊಳಗೆ ಅಕ್ರಮವಾಗಿ ಪ್ರವೇಶಿಸಿ ಕಲ್ಲು ತೂರಾಟ ನಡೆಸಿರುವುದಾಗಿ ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿ ಬಿಂದು ಸಂಸ್ಥೆಯ ಮ್ಯಾನೇಜರ್ ಲಕ್ಷ್ಮೀನಾರಾಯಣ ಅವರು ಪುತ್ತೂರು ನಗರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT