ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ, ಸಂಸ್ಕೃತಿಗೆ ಮುನಿಗಳ ಕೊಡುಗೆ ಅಪಾರ: ಭಟ್ಟಾರಕ ಸ್ವಾಮೀಜಿ

Published 25 ಏಪ್ರಿಲ್ 2024, 4:09 IST
Last Updated 25 ಏಪ್ರಿಲ್ 2024, 4:09 IST
ಅಕ್ಷರ ಗಾತ್ರ

ಮೂಡುಬಿದಿರೆ: ‘ಶ್ರವಣ ಪರಂಪರೆ ಹಾಗೂ ಧರ್ಮ ಸಂಸ್ಕೃತಿಗೆ ದಿಗಂಬರ ಮುನಿಗಳ ಕೊಡುಗೆ ಅಪಾರ’ ಎಂದು ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಶ್ರಮಣ ಸಂಸ್ಕೃತಿ ಸಮ್ಮೇಳನ 108 ಚಾರಿತ್ರ ಚಕ್ರವರ್ತಿ ಶಾಂತಿ ಸಾಗರ ಮುನಿರಾಜರ ಆಚಾರ್ಯ ಪದಾರೋಹಣ ಶತಾಬ್ದಿವರ್ಷ ಆಚರಣೆ ಪ್ರಯುಕ್ತ ಸಾವಿರ ಕಂಬದ ಬಸದಿ ಆವರಣದಲ್ಲಿ ಮಂಗಳವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

‘ನಾವು ಧಾರ್ಮಿಕ ಚೌಕಟ್ಟಿನಲ್ಲಿ ಬದುಕುವುದನ್ನು ಕಲಿಯಬೇಕು’ ಎಂದರು. ಶಾಂತಿ ಸಾಗರ್ ಶಿರಹಟ್ಟಿ ಶಾಸ್ತ್ರಿ ಮೈಸೂರು ಮಾತನಾಡಿ`ಮುನಿಗಳು, ಭಟ್ಟಾರಕರು ಹಾಗೂ ಸಾಧು ಸಂತರು ದೇಶಕ್ಕೆ ಆಸ್ತಿ ಇದ್ದಂತೆ. ಅವರಿಂದಾಗಿ ಸಾಹಿತ್ಯ, ಸಂಸ್ಕೃತಿ ಬೆಳೆದಿದೆ. ಧರ್ಮ ಜಾಗೃತಿ ಆಗಿದೆ' ಎಂದರು.

ಕೇಸರಿ ರತ್ನರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ವಕೀಲೆ ಶ್ವೇತಾ ಜೈನ್, ಪ್ರಭಾಚಂದ್ರ ಜೈನ್ ಮೂಡುಬಿದಿರೆ, ಸಂಪತ್ ಸಾಮ್ರಾಜ್ಯ, ಕೃಷ್ಣರಾಜ ಹೆಗ್ಡೆ, ಶಂಭವ ಕುಮಾರ್, ಶೈಲೇಂದ್ರ ಕುಮಾರ್, ವಜ್ರನಾಭ ಚೌಟ ನಲ್ಲೂರು, ಬಸದಿ ಮೊಕ್ತೇಸರ ಪಟ್ಣಶೆಟ್ಟಿ ಸುಧೇಶ್ ಕುಮಾರ್, ಆನಡ್ಕ ದಿನೇಶ್ ಕುಮಾರ್, ಆದರ್ಶ ಇದ್ದರು. ಉಮಾನಥ ಶೆಣೈ ಸಂಪಾದಕತ್ವದ ‘ಅತಿಶಯ ಕ್ಷೇತ್ರ ನಲ್ಲೂರು’ ಕೃತಿಯನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು.

ಗುಣಪಾಲ ಕಡಂಬ ಅವರನ್ನು ಸನ್ಮಾನಿಸಲಾಯಿತು. ಸುಜಾತ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT