ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೈವದ ಪರಿಕರ ಕಳವು: ಪೊಲೀಸರಿಂದ ಮಹಜರು

Published 29 ಜನವರಿ 2024, 14:30 IST
Last Updated 29 ಜನವರಿ 2024, 14:30 IST
ಅಕ್ಷರ ಗಾತ್ರ

ಬಜಪೆ: ಗುರುಪುರ ದೋಣಿಂಜೆಗುತ್ತಿನ ಚಾವಡಿ ಮನೆ ಸಹಿತ ಮೂರು ಕಡೆ ಭಾನುವಾರ ರಾತ್ರಿ ದೈವಗಳ ಆರಾಧನಾ ಪರಿಕರ ಕಳವಾಗಿದ್ದು, ಬಜ್ಪೆ ಪೊಲೀಸರು ಸೋಮವಾರ ಗುತ್ತಿನ ಮನೆ ಹಾಗೂ ಇತರ 2 ಕಡೆ ಪರಿಶೀಲನೆ ನಡೆಸಿದರು.

ದೋಣಿಂಜೆಗುತ್ತಿನ ಗಡಿಕಾರ ಪ್ರಮೋದ್ ಕುಮಾರ್ ರೈ ಅವರು ಜ.29ರಂದು ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಗುತ್ತಿನ ಚಾವಡಿ ಮನೆ ಹಾಗೂ ಹತ್ತಿರದಲ್ಲಿರುವ ಎರಡು ಕಲ್ಲುರ್ಟಿ ದೈವದ ಸಾನದಿಂದ 2 ಬೆಳ್ಳಿಯ ಹೂಜಿ, 3 ಗಂಟೆ, ದೀಪ ಇಡುವ ಸಾನಾದಿಕೆ (ದೀಪದ ಪರಿಕರ), 2 ಮಣಿ, 1 ಹಿತ್ತಾಳೆ ಕೊಡಪಾನ, 1 ಕರ್ಸಳೆ (ಖಡ್ಗ), 1 ಹಿತ್ತಾಳೆ ಚೆಂಬು, ಆರತಿ ಪರಿಕರ ಕಳ್ಳತನವಾಗಿದೆ. ಜ.28ರಂದು ಬೆಳಿಗ್ಗೆ ಚಾವಡಿ ಮನೆಯಲ್ಲಿ ದೀಪ ಇಡಲು ಹೋದಾಗ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT