ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪುತ್ತೂರು | ಆಸಿಡ್‌ ಎರಚಿದ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ

ಆಸಿಡ್‌ ಎರಚಿದ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಆರೋಪಿಗಳು
Published 20 ಜನವರಿ 2024, 14:28 IST
Last Updated 20 ಜನವರಿ 2024, 14:28 IST
ಅಕ್ಷರ ಗಾತ್ರ

ಪುತ್ತೂರು : 12 ವರ್ಷದ ಹಿಂದೆ ಸಂಪ್ಯ ಠಾಣಾ ವ್ಯಾಪ್ತಿಯ ಆರ್ಯಾಪು ಗ್ರಾಮದ ಕಮ್ಮಾಡಿ ಎಂಬಲ್ಲಿ ಅಮೃತ ಆಚಾರಿ ಎಂಬುವರಿಗೆ ಆಸಿಡ್ ಎರಚಿದ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷೆಗೊಳಗಾಗಿದ್ದ ಹಾಗೂ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ‘ಕನ್ವಿಕ್ಷನ್ ವಾರಂಟ್’ ಆರೋಪಿಗಳಿಬ್ಬರನ್ನು ಸಂಪ್ಯ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ತಾಲ್ಲೂಕಿನ ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ನಿವಾಸಿ ಮೋಹನ್‌ಕುಮಾರ್‌ ಹೆಗ್ಡೆ ಯಾನೆ ಮೋಹನ್ ಮತ್ತು ನರಿಮೊಗರು ಗ್ರಾಮದ ಪ್ರಶಾಂತ್ ಬಂಧಿತರು.

2012ರಲ್ಲಿ ಆರ್ಯಾಪು ಗ್ರಾಮದ ಕಮ್ಮಾಡಿ ಬಳಿ ಆರೋಪಿಗಳು ಅಮೃತ ಆಚಾರಿ ಎಂಬುವರಿಗೆ ಆಸಿಡ್ ಎರಚಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಿಬ್ಬರಿಗೂ ಶಿಕ್ಷೆ ವಿಧಿಸಿತ್ತು. ಶಿಕ್ಷೆ ಅವಧಿ ಮುಗಿದರೂ ಈ ನಡುವೆ ಪಿರ್ಯಾದಿದಾರರು ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದ್ದರಿಂದ ನ್ಯಾಯಾಲಯ ಮತ್ತೆ ಆರೋಪಿಗಳಿಗೆ ಶಿಕ್ಷೆ ವಿಧಿಸಿತ್ತು. ಆದರೆ, ಆರೋಪಿಗಳು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ಈ ಕಾರಣದಿಂದ ನ್ಯಾಯಾಲಯ ಅವರಿಬ್ಬರ ವಿರುದ್ಧ ‘ಕನ್ವಿಕ್ಷನ್ ವಾರಂಟ್’ ಆದೇಶ ಹೊರಡಿಸಿತ್ತು.

ಸಂಪ್ಯ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್‌ ರವಿ ಬಿ.ಎಸ್., ಎಸ್ಐ ಜಂಬೂರಾಜ್ ಮಹಾಜನ್ ಅವರ ಮಾರ್ಗದರ್ಶನದಲ್ಲಿ ಹೆಡ್‌ಕಾನ್‌ಸ್ಟೆಬಲ್‌ಗಳಾದ ಮಧು ಕೆ.ಎನ್, ಹರೀಶ್, ಪ್ರಶಾಂತ್, ಕಾನ್‌ಸ್ಟೆಬಲ್‌ಗಳಾದ ಗಿರೀಶ್, ಹಕೀಂ ತಂಡ ಆರೋಪಿಗಳನ್ನು ಬಂಧಿಸಿ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಪ್ರಶಾಂತ್
ಪ್ರಶಾಂತ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT