ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಕನ್ನಡ : 25 ಸಾವಿರ ಹೊಸ ಮತದಾರರು

Published 6 ಡಿಸೆಂಬರ್ 2023, 14:49 IST
Last Updated 6 ಡಿಸೆಂಬರ್ 2023, 14:49 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾರರ ನೋಂದಣಿ ಅಭಿಯಾನ ನಡೆಯುತ್ತಿದ್ದು, ಈ ವರೆಗೆ 18 ವರ್ಷ ವಯಸ್ಸು ತುಂಬಿದ 25,045 ಮತದಾರರು ಹೊಸದಾಗಿ ನೋಂದಣಿಯಾಗಿದ್ದಾರೆ. ಜಿಲ್ಲೆಯಲ್ಲಿ 18 ವರ್ಷ ವಯಸ್ಸು ತುಂಬಿರುವ ಇನ್ನೂ ಸುಮಾರು 20,494 ಮಂದಿ ಬಾಕಿ ಇದ್ದು, ಅವರನ್ನು ಮತದಾರರ ಪಟ್ಟಿಗೆ ಸೇರಿಸಲು ಪ್ರಯತ್ನ ನಡೆಯುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

3,742 ಮಂದಿಯ ಫಾರ್ಮ್-6 ಅರ್ಜಿಗಳು ವಿಲೇವಾರಿಗೆ ಬಾಕಿ ಇದ್ದು, ಶೀಘ್ರದಲ್ಲಿ ಈ ಪ್ರಕ್ರಿಯೆ ಮುಗಿಸಿ ಅರ್ಹರನ್ನು ಪಟ್ಟಿಗೆ ಸೇರಿಸಲಾಗುವುದು. ಹೆಸರು ಸೇರ್ಪಡೆಗೆ ಡಿಸೆಂಬರ್ 9 ಕೊನೆಯ ದಿನವಾಗಿದೆ. ಅರ್ಹರು ಗೂಗಲ್ ಪ್ಲೇ ಸ್ಟೋರ್‌ನಿಂದ VOTER HELPLINE ಆ್ಯಪ್‌ ಡೌನ್ ಲೋಡ್ ಮಾಡಿ ಫಾರ್ಮ್-6 ಸಲ್ಲಿಸಬಹುದು. ಅಥವಾ ವೆಬ್ ಸೈಟ್ voters.eci.gov.in ಮೂಲಕವೂ ಅರ್ಜಿ ಸಲ್ಲಿಸಬಹುದು. ಮತಗಟ್ಟೆಯ ಬೂತ್ ಮಟ್ಟದ ಅಧಿಕಾರಿಗೆ ಫಾರಂ-6 ಸಲ್ಲಿಸುವ ಮೂಲಕವೂ ಹೆಸರು ಸೇರಿಸಲು ಅವಕಾಶವಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ಸೇರ್ಪಡೆಯಾದ ಮತದಾರರ ವಿವರ

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ;3,471,

ಮೂಡುಬಿದಿರೆ;2,707

ಮಂಗಳೂರು ನಗರ ಉತ್ತರ; 3,235

ಮಂಗಳೂರು ನಗರ ದಕ್ಷಿಣ;2,635

ಮಂಗಳೂರು;3,171

ಬಂಟ್ವಾಳ;3,502

ಪುತ್ತೂರು;3,187

ಸುಳ್ಯ;3,137

***

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT