ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಬ್ರಹ್ಮಣ್ಯ: ಟ್ಯಾಂಕರ್ ಮೂಲಕ ಗಿಡಗಳಿಗೆ ನೀರು

Published 7 ಮೇ 2024, 12:59 IST
Last Updated 7 ಮೇ 2024, 12:59 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಹಸಿರೀಕರಣಕ್ಕೆ ದೇವಸ್ಥಾನದ ವತಿಯಿಂದ ವನಸಂವರ್ಧನಾ ಕಾರ್ಯಕ್ರಮದಡಿ ಗಿಡಗಳ ನಾಟಿ ಮಾಡಲಾಗಿದ್ದು, ಬೇಸಿಗೆಯಲ್ಲಿ ಆ ಗಿಡಗಳಿಗೆ ದೇವಳದ ವತಿಯಿಂದ ಟ್ಯಾಂಕರ್ ಮೂಲಕ ನೀರು ಹಾಯಿಸಲಾಗುತ್ತಿದೆ.

ಕೆಲ ವರ್ಷಗಳ ಹಿಂದೆ ನಾಟಿ ಮಾಡಿರುವ ಈ ಗಿಡಗಳು ಚಿಗುರುತ್ತಿದ್ದು, ಬಿಸಲ ಝಳಕ್ಕೆ ಸಾಯುವ ಹಂತ ತಲುಪ್ಪುತ್ತಿದ್ದು, ಅವುಗಳನ್ನು ರಕ್ಷಿಸಲು ನೀರು ಹಾಯಿಸಲು ಕ್ರಮಕೈಗೊಳ್ಳಲಾಗಿದೆ.

ಕುಕ್ಕೆ ಕ್ಷೇತ್ರವನ್ನು ಈ ಹಿಂದಿನಂತೆ ಹಸಿರಿನಿಂದ ಸಮೃದ್ಧವಾಗಿ ಕಂಗೊಳಿಸುವಂತೆ ಮಾಡಲು ದೇವಸ್ಥಾನದ ವತಿಯಿಂದ ಬೃಹತ್ ವನಸಂವರ್ಧನಾ ಕಾರ್ಯಕ್ರಮಕ್ಕೆ 2022ರಲ್ಲಿ ಚಾಲನೆ ನೀಡಲಾಗಿತ್ತು. ಗಿಡಗಳ ರಕ್ಷಣೆಗೂ ತಡೆಬೇಲಿ ನಿರ್ಮಿಸಿದ್ದು, ಗೊಬ್ಬರ ಹಾಕಿ ಪೋಷಿಸಲಾಗುತ್ತಿದೆ. ನೇರಳೆ, ಪನ್ನೇರಳೆ, ಕೆಂಡಸಂಪಿಗೆ, ರೆಂಜ, ರಂಬೂಟನ್, ಕೋಳಿಜುಟ್ಟು, ಬಟರ್‌ಫ್ರೂಟ್‌, ಕಹಿಬೇವು, ಬಿಲ್ವಪತ್ರೆ, ಸೀತಾ ಅಶೋಕ, ಸ್ಟಾರ್ ಆ್ಯಪಲ್, ಪೇರಳೆ, ಕುಂಟನೇರಳೆ, ಪುನರ್ಪುಳಿ, ಅರ್ತಿ, ಗಂಧ, ಬಾದಾಮಿ, ನೆಲ್ಲಿ, ಸೊರಗೆ, ಕದಂಬ, ಕಕ್ಕೆ, ಜಮ್ಮುನೆರಳೆ, ಹುಣಸೆ, ಪಾಲಶ, ನಾಗಲಿಂಗ ಪುಷ್ಪ, ನಾಗಸಂಪಿಗೆ, ಮಾವು, ಪೇರಳೆ, ರಾಮಫಲ, ಹಲಸು, ಚಕೋತ, ಔಷಧೀಯ ಗಿಡಗಳಾದ ಕುಟಜ, ಸ್ತ್ರೀಕುಟಜ, ಮೈನೇರಳೆ, ಅಂಕೋಡಿ, ಭವ್ಯ, ಲಕ್ಷ್ಮಣ ಫಲ, ಪಾರೀಷ, ರೋಹಿತಕ್, ವಾತಪೋತ, ಅಗ್ನಿಮಂಥ, ಮುಟುಕುಂದ, ಏಕನಾಯಕ, ಪುತ್ರಂಜೀವ, ನಾಗಕೆಸರ, ಗುಳಿಮಾವು, ಶಿವನಿ, ಹಲಸು, ಪೇರಳೆ, ಚಿಕ್ಕು, ಮಾವು, ನೇರಳೆ, ಹತ್ತಿ ಹಾಗೂ ನಾಗನಿಗೆ ಸಂಬಂಧಿಸಿದ ಪತ್ರಬಿಂಬ ಗಿಡಗಳನ್ನು ನೆಡಲಾಗಿದೆ.

ಇಲ್ಲಿ ನಾಟಿ ಮಾಡಿರುವ ಗಿಡಗಳು ದೊಡ್ಡದಾಗಿ ಕ್ಷೇತ್ರಕ್ಕೆ ಬರುವ ಭಕ್ತರು ಬೇಸಿಗೆಯಲ್ಲೂ ನೆರಳಿನಲ್ಲಿ ಓಡಾಡುವಂತೆ ಮಾಡಲು ದೇವಸ್ಥಾನದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT