ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಕ್ಕಾರು ಮತಗಟ್ಟೆಯ ವೆಬ್ ಕ್ಯಾಮೆರಾ ಕಳವು: ದೂರು

Published 30 ಏಪ್ರಿಲ್ 2024, 15:45 IST
Last Updated 30 ಏಪ್ರಿಲ್ 2024, 15:45 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ತೆಕ್ಕಾರು ಗ್ರಾಮದ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 228ರಲ್ಲಿ ಅಳವಡಿಸಿದ್ದ ವೆಬ್ ಕ್ಯಾಮೆರಾ, ಸಿಮ್, ಮೆಮೊರಿ ಕಾರ್ಡ್‌ ಕಳವು ಮಾಡಿರುವ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಚುನಾವಣೆಗೆ 2 ದಿನ ಮುನ್ನ ಕ್ಯಾಮೆರಾ ಅಳವಡಿಸಲಾಗಿತ್ತು. ಶುಕ್ರವಾರ ರಾತ್ರಿ 8 ಗಂಟೆಯವರೆಗಿನ ಮತದಾನ ಪ್ರಕ್ರಿಯೆ ದೃಶ್ಯಗಳು ದಾಖಲಾಗಿತ್ತು. ಕ್ಯಾಮೆರಾ ಹಾಗೂ ಚುನಾವಣಾ ಧ್ವಜವನ್ನೂ ಕಳವು ಮಾಡಿದ್ದಾರೆ ಎಂದು ತೆಕ್ಕಾರು ಗ್ರಾಮ ಪಂಚಾಯಿತಿ ಸಿಬ್ಬಂದಿ, ಬೂತ್ ಲೆವೆಲ್ ಅಧಿಕಾರಿ ಮಹಮ್ಮದ್ ಸಿಹಾಬ್ ಉಪ್ಪಿನಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಸುಮಾರು ₹ 10,600 ಬೆಲೆ ಬಾಳುವ ಈ ಕ್ಯಾಮರಾದಲ್ಲೇ ಸಿಮ್, ಮೆಮೊರಿ ಕಾರ್ಡ್‌ ಅಳವಡಿಸಲಾಗಿತ್ತು. ಚುನಾವಣೆ ಬಳಿಕ ಎರಡು ದಿನ ಸರ್ಕಾರಿ ರಜೆ ಇದ್ದು, ಸೋಮವಾರ ಮಧ್ಯಾಹ್ನ ತಾಲ್ಲೂಕು ಚುನಾವಣಾ ಶಾಖೆಯಿಂದ ಬಂದ ಸೂಚನೆಯಂತೆ ವೆಬ್ ಕ್ಯಾಮೆರಾವನ್ನು ಗ್ರಾಮಕರಣಿಕರ ಕಚೇರಿಗೆ ನೀಡಲು ಪಂಚಾಯಿತಿ ಸಿಬ್ಬಂದಿ ಬಂದಾಗ ಈ ಘಟನೆ ಗೊತ್ತಾಗಿದೆ.

ಕೇಬಲ್ ಕತ್ತರಿಸಿ ಕೃತ್ಯ: ಶಾಲೆಯ ಹಳೇ ಬಾಗಿಲಿಗೆ ಲಾಕ್ ಇದ್ದರೂ, ಅದನ್ನು ತಳ್ಳಿ ಬೂತ್ ಒಳಗೆ ಅಳವಡಿಸಿದ್ದ ಕ್ಯಾಮರಾ ಕಳವು ಮಾಡಿರುವುದು ಕಂಡು ಬಂದಿದೆ. ಒಳಗಿದ್ದ ಕೇಬಲ್‌ ಕತ್ತರಿಸಲಾಗಿದೆ. ಸೋಲಾರ್ ಲೈಟ್ ಸಹಿತ ಇತರ ವೈರ್‌ಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿದೆ. ಆದರೆ, ಕೇಬಲ್, ಸೋಲಾರ್ ಲೈಟ್ ಅಥವಾ ಪೀಠೋಪಕರಣಗಳನ್ನು ಕಳವು ಮಾಡಿಲ್ಲ.

ಮಂಗಳವಾರ ಬೆಳಿಗ್ಗೆ ಉಪ್ಪಿನಂಗಡಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಸಿದ್ದಾರೆ. ಮಂಗಳೂರಿನಿಂದ ಬೆರಳಚ್ಚು ತಜ್ಞರು ಭೇಟಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT