ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಸಮಾಜ ಕಲ್ಯಾಣ ಸಹಾಯಧನ ವಿತರಣೆ

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಅಶಕ್ತರಿಗೆ ನೆರವು
Published 25 ಜನವರಿ 2024, 6:47 IST
Last Updated 25 ಜನವರಿ 2024, 6:47 IST
ಅಕ್ಷರ ಗಾತ್ರ

ಮಂಗಳೂರು: ‘ಜೀವನದಲ್ಲಿ ನಾವು ಇತರರ ಬದುಕನ್ನೂ ಅವಲೋಕಿಸುತ್ತಿರಬೇಕು. ಆಗ ನಮಗಿಂತ ಬಡವರು, ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದವರು ಕಾಣಸಿಗುತ್ತಾರೆ. ಅವರಿಗಿಂತ ನಮ್ಮ ಜೀವನ ಚೆನ್ನಾಗಿದೆ ಎಂಬ ಭಾವವೇ ನಮ್ಮ ಕಷ್ಟಗಳನ್ನು ಮರೆಯುವಂತೆ ಮಾಡುತ್ತದೆ’ ಎಂದು ಮೇಯರ್ ಸುಧೀರ್ ಕುಮಾರ್ ಶೆಟ್ಟಿ ಕಣ್ಣೂರು ಹೇಳಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಇಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಸಮಾಜ ಕಲ್ಯಾಣ ಸಹಾಯಧನ’ ವಿತರಿಸಿ ಹಾಗೂ ಒಕ್ಕೂಟದ ವತಿಯಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘ಸಮಾಜದ ನೊಂದವರ ಕಣ್ಣೀರು ಒರೆಸುವ ಈ ಕಾರ್ಯ ಶ್ರೇಷ್ಠವಾದದ್ದು. ಕೈಯಲ್ಲಿ ಹಣ ಇಲ್ಲದೆ ಇದ್ದಾಗಲೂ ಸಾಲ ಮಾಡಿಯಾದರೂ  ಬಡಜನರ ಕಣ್ಣೀರು ಒರೆಸುವ ಕಾರ್ಯದಲ್ಲಿ ತೊಡಗಿರುವುದು ಬಂಟರ ಸಂಘಗಳ ಒಕ್ಕೂಟ ಮಾತ್ರ’ ಎಂದರು.  

ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ‘ನೊಂದವರ ಜೊತೆ ಎಂದಿಗೂ ನಾವಿದ್ದೇವೆ. ದುರ್ಬಲರ ಕಣ್ಣೀರು ಒರೆಸುವುದು ನನ್ನೊಬ್ಬನಿಂದ ಸಾಧ್ಯವಿಲ್ಲ. ಅದಕ್ಕೆ ದಾನಿಗಳ ನೆರವು ಬೇಕು. ಹೀಗಾಗಿ ಸಹಾಯಹಸ್ತ ಚಾಚುವ ದಾನಿಗಳು ನಿಜವಾದ ದೇವರು. ಜಾಗತಿಕ ಬಂಟರ ಸಂಘ ಇರುವವರೆಗೆ  ದೀನರ ಸೇವೆ ನಡೆಯುತ್ತಿರುತ್ತದೆ. ಎಲ್ಲರನ್ನೂ ಪ್ರೀತಿಸುವ ನಮ್ಮ ಸಮಾಜ ಜನರನ್ನು ಜಾತಿಯ ಆಧಾರದಲ್ಲಿ ವಿಂಗಡಿಸದೇ ಸೇವೆ ನೀಡುತ್ತದೆ’ ಎಂದರು.

ಪ್ರಾಸ್ತಾವಿಕ ಮಾತನಾಡಿದ ಕರ್ನಿರೆ ವಿಶ್ವನಾಥ್ ಶೆಟ್ಟಿ, ‘ಸಂಘಟನೆಯ ಅಧ್ಯಕ್ಷರಾಗುವ ವೇಳೆ 100 ಮನೆಗಳನ್ನು ಬಡ ಬಂಟ ಸಮಾಜಕ್ಕೆ ಕಟ್ಟಿಕೊಡುವುದಾಗಿ ಐಕಳ ಹರೀಶ ಶೆಟ್ಟಿ ಭರವಸೆ ನೀಡಿದ್ದರು. ಆದರೆ ಇಂದು 350ರಷ್ಟು ಮನೆಗಳನ್ನು ಕಟ್ಟಿ ಹಸ್ತಾಂತರಿಸಲಾಗಿದೆ. ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಇನ್ನೂ ಮುಂದುವರಿಯಲಿದೆ’ ಎಂದರು.

ಸಭೆಯಲ್ಲಿ ಫಲಾನುಭವಿಗಳಿಗೆ ದತ್ತಿನಿಧಿಯನ್ನು ವಿತರಿಸಲಾಯಿತು.

ಒಕ್ಕೂಟದ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಬಂಟ್ವಾಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT