ನಲ್ಲೂರು: ಬಸ್‌ಗೆ ಬಲಿಯಾದ ಬಾಲಕ

7

ನಲ್ಲೂರು: ಬಸ್‌ಗೆ ಬಲಿಯಾದ ಬಾಲಕ

Published:
Updated:

ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ನಲ್ಲೂರು ಗ್ರಾಮದ ಮದಿನಿ ಮಸೀದಿ ಎದುರು ಗೀತಾಂಜನೇಯ ಬಸ್‌ ಶುಕ್ರವಾರ ಡಿಕ್ಕಿ ಹೊಡೆದ ಪರಿಣಾಮ ಆರು ವರ್ಷದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ನಲ್ಲೂರು ಗ್ರಾಮದ ಒಂದನೇ ತರಗತಿ ವಿದ್ಯಾರ್ಥಿ ಮಹಮ್ಮದ್‌ ಜುಬೇರ್‌ ಮೃತ ಬಾಲಕ. ಶುಕ್ರವಾರದ ನಮಾಜ್‌ಗೆ ಸಂಜೆ ಈತ ಹೋಗಲು ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಬಸ್‌ನಡಿ ಸಿಲುಕಿ ಅಪ್ಪಚ್ಚಿಯಾಗಿದ್ದಾನೆ. ಅಪಘಾತದಿಂದ ಹೆದರಿದ ಚಾಲಕ ಬಸ್‌ ಬಿಟ್ಟು ಓಡಿಹೋಗಿದ್ದಾನೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಬಸ್‌ನ ಗಾಜುಗಳನ್ನು ಒಡೆದು ಹಾಕಿದ್ದಾರೆ. ನೂರಕ್ಕೂ ಹೆಚ್ಚು ಜನರಿದ್ದ ಗುಂಪು ಬಸ್‌ಗೆ ಬೆಂಕಿ ಹಚ್ಚಲು ಸಿದ್ಧತೆ ನಡೆಸಿತ್ತು. ಅಷ್ಟರೊಳಗೆ ಸ್ಥಳಕ್ಕೆ ಬಂದ ಪೊಲೀಸರು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

ಬಸ್‌ನ ಚಾಲಕ ಬ್ರೇಕ್‌ ಹಾಕದೇ ಇರುವುದರಿಂದ ಬಾಲಕ ಚಕ್ರದಡಿ ಸಿಲುಕಿದ್ದಾನೆ. ಸ್ವಲ್ಪವಾದರೂ ಬ್ರೇಕ್‌ ಹಾಕಿದ್ದರೆ ಬಾಲಕನ ಜೀವವಾದರೂ ಉಳಿಯುತ್ತಿತ್ತೇನೋ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಒಂದೂವರೆ ವರ್ಷದ ಹಿಂದೆ ಬಾಲಕನ ತಂದೆ ಮಹಮ್ಮದ್‌ ಮುಕ್ತಿಯಾರ್‌ ಸಹ ಅಪಘಾತದಲ್ಲೇ ಮೃತಪಟ್ಟಿದ್ದರು. ಗ್ರಾಮದಲ್ಲಿ ದಾವಣಗೆರೆ– ಚನ್ನಗಿರಿ ರಸ್ತೆಯಲ್ಲಿ ಹಂಪ್‌ಗಳನ್ನು ಹಾಕದೇ ಇರುವುದರಿಂದ ವಾಹನಗಳು ವೇಗವಾಗಿ ಬರುತ್ತಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಕೂಡಲೇ ಹಂಪ್‌ಗಳನ್ನು ನಿರ್ಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಚನ್ನಗಿರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !