ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧರ ಮತದಾನಕ್ಕೆ ಅತ್ಯಾಧುನಿಕ ಎಪಿಕ್ ಕಾರ್ಡ್

Last Updated 22 ಡಿಸೆಂಬರ್ 2020, 3:28 IST
ಅಕ್ಷರ ಗಾತ್ರ

ದಾವಣಗೆರೆ: ಅಂಧರು ಮತದಾನ ಮಾಡಲು ಅನುಕೂಲವಾಗುವಂತೆ ಚುನಾವಣಾ ಆಯೋಗ ಅತ್ಯಾಧುನಿಕ ಬ್ರೈಲ್‌ ಲಿಪಿ ಎಪಿಕ್ ಕಾರ್ಡ್ ಅನ್ನು ದಾವಣಗೆರೆಯ ಗುಂಡಾಳ್ ಬಿಸಿನೆಸ್ ಅಡಾಕ್ ಸೆಲ್ಯುಷನ್ ರೂಪಿಸಿದೆ.

ಶಿರಾ ವಿಧಾನಸಭೆ ಉಪ ಚುನಾವಣೆಯಲ್ಲಿ ಪ್ರಾಯೋಗಿಕವಾಗಿ ಈ ಕಾರ್ಡ್ ಬಳಕೆಗೆ ನೀಡಲಾಗಿತ್ತು, ಜನವರಿ 25ರಂದು ಮತದಾರರ ದಿನಾಚರಣೆ ವೇಳೆಗೆ ದೇಶಾದ್ಯಂತ ಈ ಕಾರ್ಡ್ ವಿತರಣೆಗೆ ಈಗ ಯೋಜನೆ ರೂಪಿಸಲಾಗಿದೆ.

‘ಈ ಹಿಂದೆ ಬ್ರೈಲ್ ಲಿಪಿಯಲ್ಲಿ ಮತದಾರರ ಗುರುತಿನ ಚೀಟಿ ಸಿದ್ಧಪಡಿಸಿ ಪ್ರಾಯೋಗಿಕವಾಗಿ ವಿತರಣೆ ಮಾಡಲಾಗಿತ್ತಾದರೂ ಕಾರ್ಡ್‌ಗಳು ಗುಣಮಟ್ಟದಲ್ಲಿ ಇರಲಿಲ್ಲ. ಆದರೆ ಈ ಬಾರಿ ಅಲ್ಟ್ರಾ ವೈಲೆಟ್ ತಂತ್ರಜ್ಞಾನ ಬಳಸಿ ಕಾರ್ಡ್ ರೂಪಿಸಲಾಗಿದೆ. ಇದರಿಂದ ನಕಲಿ ಕಾರ್ಡ್ ಸೃಷ್ಟಿ ಸೇರಿ ಹಲವು ಸಮಸ್ಯೆಗೆ ಪರಿಹಾರ ಸಿಗಲಿದೆ’ ಎನ್ನುತ್ತಾರೆ ಗುಂಡಾಳ್ ಏಜೆನ್ಸಿಯಮಂಜುನಾಥ ಗುಂಡಾಳ್.

ಅಂಧರಿಗೆ ಅನುಕೂಲವಾಗುವಂತ ಮತದಾನದ ಗುರುತಿನ ಚೀಟಿ ನೀಡುವ ಕುರಿತು ಘೋಷಣೆ ಮಾಡಿದ್ದ ಚುನಾವಣಾ ಆಯೋಗ ಪ್ರಾತಿನಿಧಿಕವಾಗಿ ಕೆಲವರಿಗೆ ಕಾರ್ಡ್ ವಿತರಿಸಿತ್ತು. ಈಗ ದೇಶಾದ್ಯಂತ ಕಾರ್ಡ್ ವಿತರಣೆಗೆ ತಯಾರಿ ನಡೆಯುತ್ತಿದ್ದು, ಅದಕ್ಕೆ ಆಧುನಿಕ ಸ್ಪರ್ಶ ಸಿಕ್ಕಿರುವುದು ವಿಶೇಷ.

‘ಈವರೆಗೆ ಅಂಧರು ಸಾಮಾನ್ಯ ಮತದಾರರ ಗುರುತಿನ ಚೀಟಿ ಬಳಸಿ ಮತದಾನ ಮಾಡಿದ್ದರು. ಆದರೆ ಇದು ತಮ್ಮದೇ ಗುರುತಿನ ಚೀಟಿ ಹೌದೋ, ಅಲ್ಲವೋ ಎಂಬುದರ ಕುರಿತು ಖಚಿತ ಇರುತ್ತಿರಲಿಲ್ಲ. ಆದರೆ ಸದ್ಯ ಆಧುನಿಕ ತಂತ್ರಜ್ಞಾನದಲ್ಲಿ ರೂಪಿಸಿದ ಮತದಾರರ ಗುರುತಿನ ಚೀಟಿಯಲ್ಲಿ ಹೆಸರು, ವಯಸ್ಸು, ವಿಳಾಸ ಸೇರಿ ಪ್ರತಿ ಮಾಹಿತಿ ಕೂಡ ಬ್ರೈಲ್ ಲಿಪಿಯಲ್ಲಿ ಇರಲಿದೆ. ಇದರಿಂದ ಅವರು ಸುಲಭವಾಗಿ ತಮ್ಮ ಕಾರ್ಡ್‌ಗಳನ್ನು ಗುರುತಿಸಬಹುದು’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT