ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಭಾ ಬೆಂಬಲಿಸಲು ವಿವಿಧ ಸಮಾಜಗಳ ಮುಖಂಡರಿಗೆ ಮನವಿ

Published 8 ಏಪ್ರಿಲ್ 2024, 5:58 IST
Last Updated 8 ಏಪ್ರಿಲ್ 2024, 5:58 IST
ಅಕ್ಷರ ಗಾತ್ರ

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಪರ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದಲ್ಲಿ ಜೈನ, ಪಟೇದಾರ್ ಮತ್ತು ವಿಷ್ಣು ಸಮಾಜದವರ ಸಭೆ ನಡೆಯಿತು.

ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 10 ವರ್ಷ ಸುಳ್ಳು ಹೇಳಿಯೇ ಅಧಿಕಾರ ನಡೆಸಿತು’ ಎಂದು ದೂರಿದರು.

‘ಪ್ರತಿ ಬಾರಿಯೂ ನಮ್ಮನ್ನು ಬೆಂಬಲಿಸುತ್ತಾ ಬಂದಿರುವ ಈ ಸಮಾಜಗಳು ಮುಂದೆಯೂ ನಮ್ಮ ಬೆಂಬಲಕ್ಕೆ ನಿಲ್ಲುತ್ತಿರಿ ಎಂಬ ವಿಶ್ವಾಸವಿದೆ’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ‘ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ್ ಅವರು ದಾವಣಗೆರೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಸಂಕಷ್ಟದಲ್ಲಿರುವವರು ನಮ್ಮ ಬಳಿಗೆ ಬರುತ್ತಿದ್ದು, ಇದು ನಮ್ಮ ಮನೆತನದ ಮೇಲೆ ಜನರಿಗೆ ಇರುವ ಭರವಸೆ’ ಎಂದರು.

ಶಾಸಕ ಕೆ.ಎಸ್. ಬಸವಂತಪ್ಪ, ಚಂಪಾಲಾಲ್ ಡೆಲಿರಿಯಾ, ಶೈಲಾ, ಮಹೇಂದ್ರ ಕುಮಾರ್, ಜಯಚಂದ್ರ ಜೈನ್, ಸಾವನ್ ಜೈನ್, ರಾಜು ಭಂಡಾರಿ, ಪ್ರವೀಣ್ ಪಿಂಟು, ಕಿಶೋರ್ ಕುಮಾರ್, ವಿಜಯಕುಮಾರ್ ಜೈನ್, ಕುಂದನ್‍ಮಾಲ್, ಈಶ್ವರಸಿಂಗ್, ನಾಕೋಡ ಸುರೇಶ್, ಡಾ. ರಮೇಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಮುಖಂಡ ಎ.ನಾಗರಾಜ್ ಇದ್ದರು.

ಕಾಂಗ್ರೆಸ್ ಗ್ಯಾರಂಟಿಗಳನ್ನು ಮನೆ ಮನೆಗಳಿಗೆ ತಲುಪಿಸಲು ಕರೆ

ದಾವಣಗೆರೆ: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ 29 ಮತ್ತು 30ನೇ ವಾರ್ಡ್‌ಗಳಲ್ಲಿ ಭಾನುವಾರ ಸಭೆ ನಡೆಸಲಾಯಿತು.

‘ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುತ್ತಿದ್ದು, ವಾರ್ಡ್‍ನಲ್ಲಿ ಯಾರಿಗಾದರೂ ಸೌಲಭ್ಯ ತಲುಪದಿದ್ದರೆ ಅಂತಹವರ ಬಗ್ಗೆ ಮಾಹಿತಿ ನೀಡಿದರೆ ಯೋಜನೆ ತಲುಪಿಸುವ ಕೆಲಸ ಮಾಡೋಣ’ ಎಂದು ಮುಖಂಡರು ತಿಳಿಸಿದರು.

ನಿಟುವಳ್ಳಿ ಆಂಜನೇಯ ಬಡಾವಣೆ ಮತ್ತು ಆವರಗೆರೆ ವಾರ್ಡ್‌ನಲ್ಲಿ ಕಾಂಗ್ರೆಸ್ ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಟ್ಟು ಲೋಕಸಭಾ ಚುನಾವಣೆಯಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಹೆಚ್ಚಿನ ಮತ ನೀಡುವ ಗುರಿ ಹೊಂದಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಎಸ್. ಮಲ್ಲಿಕಾರ್ಜುನ್, ಎ. ನಾಗರಾಜ್, ಆರ್.ಎಚ್. ನಾಗಭೂಷಣ್, ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್, ಕೆಪಿಸಿಸಿ ಸದಸ್ಯ ಆರ್.ಎಸ್. ಶೇಖರಪ್ಪ, ಮಹಾನಗರ ಪಾಲಿಕೆ ಸದಸ್ಯರಾದ ಜಯಮ್ಮ ಗೋಪಿನಾಯ್ಕ, ರೇಣುಕಮ್ಮ ಶಾಂತರಾಜ್, ಮಂಜಮ್ಮ ಹನುಮಂತಪ್ಪ, ಟಿ.ಡಿ. ಹಾಲೇಶ್, ಕರೇಗೌಡ್ರು ಮಂಗಳಮ್ಮ, ರೇವಣಪ್ಪ, ಮಂಜಣ್ಣ, ಹನುಮಂತಪ್ಪ, ಡಿ.ಎಸ್.ಕೆ. ಪರಶುರಾಮ್, ಪ್ರವೀಣ್ ಕುಮಾರ್, ಕರಿಯಪ್ಪ, ಅಣ್ಣೇಶ್ ನಾಯ್ಕ ಇದ್ದರು.

ಶಿವಕುಮಾರ್ ಒಡೆಯರ್ ಬೆಂಬಲ: ಲೋಕಸಭಾ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಚೆನ್ನಯ್ಯ ಒಡೆಯರ್ ಅವರ ಪುತ್ರ ಶಿವಕುಮಾರ್ ಒಡೆಯರ್ ಅವರು ಪ್ರಭಾ ಮಲ್ಲಿಕಾರ್ಜುನ್‍ ಅವರಿಗೆ ಬೆಂಬಲಿ ಸೂಚಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಜೈನ ಸಮಾಜದ ಮಹಿಳೆಯರ ಬಳಿ ಮತ ಯಾಚಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಜೈನ ಸಮಾಜದ ಮಹಿಳೆಯರ ಬಳಿ ಮತ ಯಾಚಿಸಿದರು.

ನವಿಲೇಹಾಳ್ ಸಹಕಾರಿ ಸಂಘದ ಅಧ್ಯಕ್ಷ ಮೋಹನ್ ಕಾಂಗ್ರೆಸ್ ಸೇರ್ಪಡೆ

ದಾವಣಗೆರೆ: ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ನವಿಲೇಹಾಳ್ ಮತ್ತು ಬಾಡ ಗ್ರಾಮದ ಬಿಜೆಪಿ ಮುಖಂಡರು ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಶಾಸಕ ಕೆ.ಎಸ್. ಬಸವಂತಪ್ಪ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ನವಿಲೇಹಾಳ್ ಗ್ರಾಮದ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಮೋಹನ್ ಮತ್ತು ಅವರ ಬೆಂಬಲಿಗರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಅದೇ ರೀತಿ ಬಾಡ ಗ್ರಾಮದ ಬಿಜೆಪಿ ಮುಖಂಡ ಡಿ.ಎಂ.ಸುರೇಶ್ ಮತ್ತು ಅವರ ಬೆಂಬಲಿಗರು ಬಸವಾಪಟ್ಟಣ ಬ್ಲಾಕ್ ಅಧ್ಯಕ್ಷ ಬಿ.ಜಿ.ನಾಗರಾಜ್ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಬಾಡ ರುದ್ರಸ್ವಾಮಿ ಎಸ್.ಕೆ. ಚಂದ್ರಣ್ಣ ಸೇರಿದಂತೆ ಕಾಂಗ್ರೆಸ್ ನಾಯಕರು ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT