ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಗಿರಿ | ಅವಹೇಳನಕಾರಿ ಹೇಳಿಕೆ: ಶಾಸಕ ಬಿ.ಪಿ.ಹರೀಶ್ ಕ್ಷಮೆಯಾಚನೆಗೆ ಒತ್ತಾಯ

Published 11 ಜೂನ್ 2024, 14:10 IST
Last Updated 11 ಜೂನ್ 2024, 14:10 IST
ಅಕ್ಷರ ಗಾತ್ರ

ಚನ್ನಗಿರಿ: ‘ಹರಿಹರ ಶಾಸಕ ಬಿ.ಪಿ.ಹರೀಶ್ ಈಚೆಗೆ ನಡೆದ ಸಭೆಯೊಂದರಲ್ಲಿ ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ರೇಣುಕಾಚಾರ್ಯ ಹಾಗೂ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಅಕ್ಷಮ್ಯ ಅಪರಾಧ. ಕೂಡಲೇ ಈ ಹೇಳಿಕೆಯನ್ನು ಹಿಂಪಡೆದುಕೊಂಡು ಕ್ಷಮೆ ಯಾಚಿಸಬೇಕು’ ಎಂದು ಬಿಜೆಪಿ ಮುಖಂಡ ಟಿ.ನಾಗರಾಜ್ ಒತ್ತಾಯಿಸಿದ್ದಾರೆ.

‘ಹರೀಶ್ ಅವರು ಹರಿಹರ ಕ್ಷೇತ್ರದಿಂದ 25,000 ಲೀಡ್ ಕೊಡುತ್ತೇವೆ ಎಂದು ಭಾಷಣ ಮಾಡಿ, ಕಾಂಗ್ರೆಸ್‌ಗೆ ಲೀಡ್ ಸಿಗುವಂತೆ ಮಾಡಿದ್ದೀರಿ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದು, ಬೇರೆಯವರ ತಟ್ಟೆಯಲ್ಲಿ ನೊಣ ಹುಡುಕಲಿಕ್ಕೆ ಬಂದಿದ್ದೀರಿ. ಮೊದಲು ನಿಮ್ಮ ಕ್ಷೇತ್ರವನ್ನು ನೋಡಿಕೊಳ್ಳಿ. ಅದು ಬಿಟ್ಟು ಬೇರೆಯವರ ಕ್ಷೇತ್ರದ ಬಗ್ಗೆ ಹಾಗೂ ನಾಯಕರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು’ ಎಂದು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ನಿಮ್ಮ ಕ್ಷೇತ್ರದ ಸೋಲನ್ನು ಮುಚ್ಚಿಹಾಕಲು ಬೇರೆ ಕ್ಷೇತ್ರದ ಮೇಲೆ ಗೂಬೆ ಕೂರಿಸುತ್ತಿದ್ದೀರಿ. ನೀವು ಕಾಂಗ್ರೆಸ್‌ಗೆ ಹೋಗಿ ಪುನಃ ಬಿಜೆಪಿ ಸೇರಿದವರು. ನಮ್ಮ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಚುನಾವಣಾ ಪ್ರಚಾರ ಮಾಡಿರುವುದಕ್ಕೆ 73,000 ಮತಗಳು ಬಿಜೆಪಿ ಅಭ್ಯರ್ಥಿಗೆ ಬಿದ್ದಿವೆ. ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಶೋಭೆ ತರುವಂತಹದಲ್ಲ’ ಎಂದು ಹೇಳಿದರು.

ಎಚ್.ವಿ. ಮಲ್ಲಿಕಾರ್ಜುನ್, ಉಮೇಶ್, ಕೃಷ್ಣಪ್ಪ, ಸಂಗಮೇಶ್, ಕೆ.ಬಸವರಾಜ್, ಪಟ್ಲಿ ನಾಗರಾಜ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT