ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬುದ್ಧನ ತತ್ವಗಳಲ್ಲಿ ಅನುಭವದ ಅಮೃತ ಇದೆ: ಚ್.ಎಸ್. ಮಂಜುನಾಥ್‌ ಕುರ್ಕಿ

Published 24 ಮೇ 2024, 5:47 IST
Last Updated 24 ಮೇ 2024, 5:47 IST
ಅಕ್ಷರ ಗಾತ್ರ

ದಾವಣಗೆರೆ: ‘ಸಮಾಜದ ಸುಧಾರಣೆಗೆ ಅಷ್ಟಾಂಗ ಮಾರ್ಗಗಳನ್ನು ಬೋಧಿಸಿದ ಬುದ್ಧನ ತತ್ವಗಳಲ್ಲಿ ಅನುಭವದ ಅಮೃತವಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಚ್.ಎಸ್. ಮಂಜುನಾಥ್‌ ಕುರ್ಕಿ ಹೇಳಿದರು.

ನಗರದ ಡಿಆರ್‌ಎಂ ವಿಜ್ಞಾನ ಕಾಲೇಜಿನಲ್ಲಿ ಬುದ್ಧ ಪೂರ್ಣಿಮೆ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ‘ಜ್ಞಾನ ಜ್ಯೋತಿ‘ ಕಾರ್ಯಕ್ರಮದಲ್ಲಿ ಮಾತನಾಡಿದರು.

’ಸಿರಿವಂತಿಕೆಯನ್ನು ತ್ಯಜಿಸಿ, ಅಲೌಕಿಕ ಜ್ಞಾನದ ಕಡೆಗೆ ಗಮನ ಹರಿಸಿ ಆಸೆಯೇ ದುಃಖಕ್ಕೆ ಮೂಲ ಕಾರಣ ಎಂದ ಬುದ್ಧನ ತತ್ವಗಳನ್ನು ಪಾಲಿಸಬೇಕು‘ ಎಂದು ಸಲಹೆ ನೀಡಿದರು.

‘6ನೇ ಶತಮಾನದಲ್ಲೇ ಬುದ್ಧ ಬೋಧಿಸಿದ ತತ್ವಗಳು ಇಂದಿಗೂ ಪ್ರಸ್ತುತ. ಆತನ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ನಾವೆಲ್ಲರೂ ಕಂಕಣಬದ್ಧರಾಗಬೇಕು’ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ರೂಪಶ್ರೀ ಎಂ.ಪಿ. ಕಿವಿಮಾತು ಹೇಳಿದರು.

ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಮೊಹಮ್ಮದ್‌, ‌ಪ್ರಾಧ್ಯಾಪಕರಾದ ವಸಂತನಾಯ್ಕ್ ಟಿ. ಹಾಗೂ ಬೋಧಕ–ಬೋಧಕೇತರ ಸಿಬ್ಬಂದಿ ಇದ್ದರು.

ವಿದ್ಯಾರ್ಥಿಗಳಾದ ಎಂ.ಜಿ. ವಿನಯಕುಮಾರ್‌ ಸ್ವಾಗತಿಸಿದರು. ಎಂ.ಎಂ. ಪೂರ್ಣಿಮಾ ವಂದಿಸಿದರು. ಚಂದನಾ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT