ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇಬೆನ್ನೂರು: ಮುಂದುವರಿದ ಅಕ್ರಮ ಪಂಪ್‌ಸೆಟ್‌ ತೆರವು ಕಾರ್ಯಾಚರಣೆ

Published 20 ಫೆಬ್ರುವರಿ 2024, 5:14 IST
Last Updated 20 ಫೆಬ್ರುವರಿ 2024, 5:14 IST
ಅಕ್ಷರ ಗಾತ್ರ

ಮಲೇಬೆನ್ನೂರು: ಬೇಸಿಗೆ ಹಂಗಾಮಿನ 2ನೇ ಸರದಿಯಲ್ಲಿ ಭದ್ರಾ ನಾಲೆ ನೀರು ಬಿಡುಗಡೆ ಮಾಡಲಾಗಿದ್ದು, ತಹಶೀಲ್ದಾರ್‌ ಗುರುಬಸವರಾಜ್‌ ನೇತೃತ್ವದಲ್ಲಿ ಸೋಮವಾರ ಅಕ್ರಮ ಪಂಪ್‌ಸೆಟ್‌ಗಳ ತೆರವು ಕಾರ್ಯಾಚರಣೆ ನಡೆಯಿತು.

ಮುಖ್ಯನಾಲೆಗೆ ಕೊಪ್ಪ ಹಾಲಿವಾಣದ ಮಧ್ಯೆ ಅಳವಡಿಸಿದ್ದ ಪಂಪ್‌ಸೆಟ್‌ಗಳನ್ನು ಪೊಲೀಸರು ತೆರವುಗೊಳಿಸಿದರು.

ಕಾರ್ಯಾಚರಣೆಯಲ್ಲಿ 30ಕ್ಕೂ ಹೆಚ್ಚು ಅಕ್ರಮ ಪಂಪ್‌ಸೆಟ್‌ಗಳನ್ನು ತೆರವು ಮಾಡಲಾಗಿದೆ.

ಕೆಲವೆಡೆ ರೈತರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಭದ್ರಾ ನಾಲೆಯಲ್ಲಿ ನಿಗದಿತ ಪ್ರಮಾಣದಲ್ಲಿ ನೀರು ಹರಿದು ಬರುತ್ತಿಲ್ಲ. ಮೇಲ್ಭಾಗದಲ್ಲಿ ಅಳವಡಿಸಿದ ಪಂಪ್‌ಸೆಟ್‌ ತೆರವಿಗೆ ಜಿಲ್ಲಾಡಳಿತ ಮುಂದಾಗುತ್ತಿಲ್ಲ ಎಂದು ರೈತರು ದೂರಿದರು.

‘ಭದ್ರಾ ನಾಲೆಗೆ ಅಳವಡಿಸಿದ ಪಂಪ್‌ಸೆಟ್‌ ತೆರವು ಕಣ್ಣೊರೆಸುವ ತಂತ್ರ. ಘಟಕ –2ರಲ್ಲಿ ನೀರಿನ ಹರಿವು ವ್ಯತ್ಯಯವಾಗುತ್ತಿದೆ. ಬೆಳಿಗ್ಗೆ 11ಕ್ಕೆ ಅಡಿ ಇದ್ದರೆ ಸಂಜೆ 10.8 ಇದೆ. ಜಲ ಮಾಪನ, ಜಲ ನಿರ್ವಹಣೆ ವ್ಯವಸ್ಥೆ ಸರಿಯಿಲ್ಲ. ಎಂಜಿನಿಯರ್‌ಗಳು ಇಲ್ಲ. ಆದರೂ ರೈತರ ತೋಟಗಳಿಗೆ ನೀರು ಹರಿಸಲು ಮುಂದಾಗಿದ್ದಾರೆ’ ಎಂದು ಹೊಳೆಸಿರಿಗೆರೆ ಫಾಲಾಕ್ಷಪ್ಪ ಆರೋಪಿಸಿದರು.

‘ಮಲೇಬೆನ್ನೂರು ಭಾಗದಲ್ಲಿ 3 ದಿನ ಆಂತರಿಕ ಸರದಿ ರೂಪಿಸಿ ನೀರು ಹರಿಸಲಾಗುತ್ತಿದೆ. ಮಂಗಳವಾರಕ್ಕೆ ಸರದಿ ಮುಗಿಯಲಿದೆ. ಆದರೆ ಯಾವ ಉಪ ನಾಲೆಯಲ್ಲಿಯೂ 2 ಕಿ.ಮೀ ನೀರು ಹರಿದಿಲ್ಲ. ಅಡಿಕೆ, ತೆಂಗಿನ ತೋಟ ಒಣಗುವುದು ಖಚಿತ. ಕಾಡಾ ಮುಖ್ಯಸ್ಥರು, ಸಚಿವರಾದ ಎಸ್‌.ಎಸ್.‌ ಮಲ್ಲಿಕಾರ್ಜುನ, ಸಚಿವ ಮಧು ಬಂಗಾರಪ್ಪ, ಶಾಸಕರು, ಜಿಲ್ಲಾಧಿಕಾರಿ, ಕೃಷಿ ಅಧಿಕಾರಿಗಳು ಸರ್ವೆ ಮಾಡಲಿ’ ಎಂದು ಒತ್ತಾಯಿಸಿದರು.

ಕಾರ್ಯಾಚರಣೆಯಲ್ಲಿ‌ ಉಪತಹಶೀಲ್ದಾರ್‌ ಆರ್.‌ ರವಿ, ಎಎಸ್‌ಐ ಬಸವರಾಜ್, ಕಂದಾಯ ನಿರೀಕ್ಷಕ ಆನಂದ್‌, ಗ್ರಾಮ ಆಡಳಿತಾಧಿಕಾರಿ ಅಣ್ಣಪ್ಪ,ಕರ್ನಾಟಕ ನೀರಾವರಿ ನಿಗಮದ ಎಂಜಿನಿಯರ್‌ ಪ್ರಭುಗೌಡ, ಭರತ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT