ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ವಸತಿ ಸೌಲಭ್ಯ ಕಲ್ಪಿಸಲು ಆಗ್ರಹ

Published 11 ಫೆಬ್ರುವರಿ 2024, 14:28 IST
Last Updated 11 ಫೆಬ್ರುವರಿ 2024, 14:28 IST
ಅಕ್ಷರ ಗಾತ್ರ

ದಾವಣಗೆರೆ: ಹರಿಹರ ತಾಲ್ಲೂಕಿನ ಭಾನುವಳ್ಳಿಯಲ್ಲಿ ಗುಡಿಸಲುಗಳಲ್ಲಿ ವಾಸಿಸುತ್ತಿರುವ 200 ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಗ್ರಾಮದ ನಿವಾಸಿಗಳು ಒತ್ತಾಯಿಸಿದರು.

‘ವಸತಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ 2023ರ ಜೂನ್ ತಿಂಗಳಲ್ಲಿ ಪಾದಯಾತ್ರೆ ನಡೆಸಿ ಮನವಿ ಮಾಡಿದ್ದರಿಂದ ಅಂದಿನ ತಹಶೀಲ್ದಾರ್ ಅವರು ಗ್ರಾಮದ ಸರ್ವೇ ನಂ.239ರಲ್ಲಿ 2.27 ಎಕರೆ ಜಮೀನನ್ನು ಕಾಯ್ದಿರಿಸಲು ದಾವಣಗೆರೆ ಉಪವಿಭಾಗಾಧಿಕಾರಿಗೆ ಪ್ರಸ್ತಾವ ಸಲ್ಲಿಸಿದ್ದರು. ಆದರೆ ಸರ್ವೇ ದಾಖಲೆಗಳಲ್ಲಿ ಲೋಪದೋಷ ಇದ್ದುದರಿಂದ ಸರಿಪಡಿಸಿ ಮರು ಪ್ರಸ್ತಾವ ಸಲ್ಲಿಸಿದರೂ ತಹಶೀಲ್ದಾರ್ ಮರು ಪ್ರಸ್ತಾವ ಕಳುಹಿಸಿಲ್ಲ’ ಎಂದು ಡಿಎಸ್‌ಎಸ್ ಮುಖಂಡ ಸಿ.ಚೌಡಪ್ಪ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘2023ರ ಡಿ.26ರಂದು ಹರಿಹರ ತಾಲ್ಲೂಕು ಕಚೇರಿ ಎದುರು ಅನಿರ್ದಿಷ್ಟ ಅವಧಿಗೆ ಧರಣಿ ಹಮ್ಮಿಕೊಂಡಿದ್ದು, ತಾಲ್ಲೂಕು ಹಾಗೂ ಜಿಲ್ಲಾಡಳಿತಗಳು ಸ್ಪಂದಿಸಿಲ್ಲ. ನಮಗೆ 239/24ರ 2.32 ಎಕರೆ ಎ.ಕೆ. ಸರ್ವೀಸ್ ಇನಾಂ ಜಮೀನಿನಲ್ಲಿ ಇಂದ್ರಮ್ಮ ಎಂಬವರು 57 ವರ್ಷಗಳಿಂದ ಸ್ವಾಧೀನಾನುಭವ ಹೊಂದಿದ್ದು, ಆದಿಭೋಗದಾರಿಕೆ ಹಕ್ಕು ನೀಡಲು ಅರ್ಜಿ ಸಲ್ಲಿಸಿದ್ದು, ಕೋರ್ಟ್‌ನಲ್ಲೂ ದಾವೆ ಹೂಡಿದ್ದಾರೆ. ನಮಗೆ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ. ಅವರಿಗೆ ಜಮೀನು ಮಂಜೂರು ಮಾಡಬಾರದು’ ಎಂದು ಆಗ್ರಹಿಸಿದರು.

ಗ್ರಾಮದ ನಿವಾಸಿಗಳಾದ ಲಕ್ಷ್ಮಣಪ್ಪ, ಪುಷ್ಪಾ ಸುಶೀಲಮ್ಮ, ಹನುಮಂತಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT