ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಳಂಗ ಪ್ರಾಥಮಿಕ ಪತ್ತಿನ ಸಂಘ: ನಿರ್ದೇಶಕರ ಆಯ್ಕೆ

Published 11 ಫೆಬ್ರುವರಿ 2024, 14:27 IST
Last Updated 11 ಫೆಬ್ರುವರಿ 2024, 14:27 IST
ಅಕ್ಷರ ಗಾತ್ರ

ಸವಳಂಗ (ನ್ಯಾಮತಿ): ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 5 ವರ್ಷದ ಆಡಳಿತ ಮಂಡಳಿಯ 12 ನಿರ್ದೇಶಕರ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆಯಿತು. ಈ ಪೈಕಿ ನಾಲ್ವರು ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 8 ಸ್ಥಾನಗಳಿಗೆ ಚುನಾವಣೆ ನಡೆಯಿತು.

ಚುನಾವಣೆಯಲ್ಲಿ ಎಂ.ಜಿ.ಕರಿಬಸಪ್ಪ ಮಾಚಿಗೊಂಡನಹಳ್ಳಿ, ಕೆ.ಕೆ.ರಮೇಶ ಕೊಡತಾಳು, ಎಂ.ರಾಜಪ್ಪ ಕೊಡತಾಳು, ಎಂ.ಜಿ.ಷಣ್ಮುಖಪ್ಪ ಮಾದಾಪುರ, ಡಿ.ಎಚ್.ಲೋಕಪ್ಪ ಕೊಡತಾಳು, ಯಶೋಧಮ್ಮ ಮಾದಾಪುರ, ಕೆ.ಎಸ್.ವೀರಮ್ಮ ಕೊಡತಾಳು, ಎಸ್.ಎನ್.ಶಾಂತನಾಯ್ಕ ಸವಳಂಗ ವಿಜಯಿಯಾದರು.

ಎ.ಷಣ್ಮುಖಪ್ಪ ಸವಳಂಗ, ಪ್ರಭುದೇವ ಸೋಗಿಲು, ರಂಗಪ್ಪ ಮಾದಾಪುರ, ಎನ್.ಸುರೇಶಚಾರಿ ಸೋಗಿಲು (ಅವಿರೋಧ) ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಕರ್ತವ್ಯ ನಿರ್ವಹಿಸಿದ ಕೆ.ಜಿ.ನವೀನಕುಮಾರ ಪ್ರಕಟಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಜಿ.ಗಣೇಶ ಮತ್ತು ಸಿಬ್ಬಂದಿ ಸಹಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT