ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಪರಿಹಾರ ನಿಧಿಗೆ ನೌಕರರ ನೆರವು: ಸಿ.ಎಸ್.ಷಡಾ‌ಕ್ಷರಿ

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾ‌ಕ್ಷರಿ
Published 11 ಜನವರಿ 2024, 21:22 IST
Last Updated 11 ಜನವರಿ 2024, 21:22 IST
ಅಕ್ಷರ ಗಾತ್ರ

ದಾವಣಗೆರೆ: ಸರ್ಕಾರ ಬಯಸಿದರೆ ರಾಜ್ಯ ಸರ್ಕಾರಿ ನೌಕರರ ಸಂಬಳದಿಂದ ಬರ ಪರಿಹಾರ ನಿಧಿಗೆ ನೆರವು ನೀಡುವುದಾಗಿ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್.ಷಡಾ‌ಕ್ಷರಿ ಹೇಳಿದರು.

ಪುಣ್ಯಕೋಟಿ ಯೋಜನೆಗೆ ₹50 ಕೋಟಿ, ಪ್ರವಾಹದ ಸಂದರ್ಭದಲ್ಲಿ ₹200 ಕೋಟಿ ಹಾಗೂ ಕೋವಿಡ್‌ ಸಂದರ್ಭ ಸೇರಿದಂತೆ ನಾನು ಅಧ್ಯಕ್ಷನಾಗಿರುವ ಅವಧಿಯಲ್ಲಿ ಒಟ್ಟು ₹1,000 ಕೋಟಿಯಷ್ಟು ನೆರವು ನೀಡಲಾಗಿದೆ. ಮುಖ್ಯಮಂತ್ರಿಯವರು ಈ ಸಂಬಂಧ ಚರ್ಚೆಗೆ ಆಹ್ವಾನಿಸಿದ್ದು, ಅವರ ಜೊತೆ ಚರ್ಚಿಸಿ ನೆರವು ಒದಗಿಸುವ ಬಗ್ಗೆ ತಿಳಿಸಲಾಗುವುದು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘7ನೇ ವೇತನ ಆಯೋಗದ ಶಿಫಾರಸು ಜಾರಿ, ಹಳೆ ಪಿಂಚಣಿ ವ್ಯವಸ್ಥೆ ಮರು ಸ್ಥಾಪನೆ, ಆರೋಗ್ಯ ಸಂಜೀವಿನಿ ಸೇರಿದಂತೆ ಇತರ ಬೇಡಿಕೆಗಳ  ಈಡೇರಿಕೆಗೆ ಮುಖ್ಯಮಂತ್ರಿಯವರ ಗಮನ ಸೆಳೆಯುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿನ ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರಿಗೆ ಮನವಿ ಸಲ್ಲಿಸಲಾಗುತ್ತಿದೆ. ಮುಂಬರುವ ಬಜೆಟ್ ಒಳಗಾಗಿ ಸರ್ಕಾರ ನಮ್ಮ ಬೇಡಿಕೆಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT