ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಮತದಾನ ಜಾಗೃತಿಗೆ ಫ್ಯಾಶನ್ ಶೋ

Published 21 ಏಪ್ರಿಲ್ 2024, 4:58 IST
Last Updated 21 ಏಪ್ರಿಲ್ 2024, 4:58 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಶನಿವಾರ ಗ್ಲಾಸ್‍ಹೌಸ್‍ನಲ್ಲಿ ಮಹಿಳೆಯರು ಫ್ಯಾಶನ್ ಶೋ ಮೂಲಕ ಮತದಾನದ ಜಾಗೃತಿ ಮೂಡಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ್ ಮಾತನಾಡಿ, ‘ಮೇ 7ರಂದು ತಪ್ಪದೇ ಎಲ್ಲರೂ ಮತಗಟ್ಟೆಗೆ ಬಂದು ಮತದಾನ ಮಾಡುವ ಮೂಲಕ ದೇಶದ ಪ್ರಜಾಪ್ರಭುತ್ವಕ್ಕೆ ಹೆಚ್ಚು ಶಕ್ತಿಯನ್ನು ತುಂಬಬೇಕಾಗಿದೆ. ನೀವು ಮತದಾನ ಮಾಡಿ ನಿಮ್ಮ ಕುಟುಂಬ, ನೆರೆಹೊರೆ, ವಾರ್ಡ್, ಗ್ರಾಮದ ಜನರನ್ನು ಉತ್ತೇಜಿಸಿ ಮತದಾನ ಹೆಚ್ಚಿಸಲು ಶ್ರಮ ವಹಿಸಬೇಕು’ ಎಂದು ಸಲಹೆ ನೀಡಿದರು.

ನೂರಾರು ಮಹಿಳೆಯರು ಹೊಸ ಹೊಸ ಉಡುಪುಗಳೊಂದಿಗೆ ಹೆಜ್ಜೆ ಹಾಕುವ ಮೂಲಕ ಫ್ಯಾಶನ್ ಶೋನಲ್ಲಿ ಭಾಗಿಯಾಗಿ ಮತದಾನ ಮಹತ್ವ ಸಾರುವ ಘೋಷಣೆಯುಳ್ಳ ಪ್ಲೆಕಾರ್ಡ್‍ಗಳನ್ನು ಹಿಡಿದು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

ಜಿಲ್ಲಾ ಪಂಚಾಯಿತಿ ಯೋಜನಾ ಉಪನಿರ್ದೇಶಕಿ ಶಾರದಮ್ಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಕ್ರಮ ಅಧಿಕಾರಿ ಅಶೋಕ್ ತಾಮ್ಲೆ, ಎಸಿಡಿಪಿಒ ಪ್ರಿಯದರ್ಶನಿ, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT