ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾಳಿ | ಮನೆಗೆ ಆಕಸ್ಮಿಕ ಬೆಂಕಿ: ಅಪಾರ ನಷ್ಟ

Published 11 ಏಪ್ರಿಲ್ 2024, 14:30 IST
Last Updated 11 ಏಪ್ರಿಲ್ 2024, 14:30 IST
ಅಕ್ಷರ ಗಾತ್ರ

ಹೊನ್ನಾಳಿ: ಪಟ್ಟಣದ ಸರ್ವರಕೇರಿ ನಿವಾಸಿ ಅನಿತಾಮೋಹನ್ ಅಂಡಿ ಅವರ ಮನೆಗೆ ಗುರುವಾರ ಆಕಸ್ಮಿಕವಾಗಿ ಬೆಂಕಿ ಬಿದ್ದು ಬೆಳ್ಳಿ, ಬಂಗಾರ, ಬಟ್ಟೆ ಹಾಗೂ ನಗದು ಸೇರಿ ಲಕ್ಷಾಂತರ ರೂಪಾ ನಷ್ಟ ಸಂಭವಿಸಿದೆ.

ಗುರುವಾರ ಬೆಳಗಿನ ಜಾವ 6 ಗಂಟೆ ವೇಳೆಯಲ್ಲಿ ಮನೆಗೆ ಬೆಂಕಿ ತಗುಲಿದ್ದು, ನಿವಾಸಿಗಳು ಮುಂಭಾಗದ ದುರಸ್ತಿ ಕಾರ್ಯದಲ್ಲಿರುವ ಮನೆಯಲ್ಲಿ ವಾಸವಿದ್ದರು. ಹೀಗಾಗಿ ಯಾವುದೇ ಪ್ರಾಣಪಾಯವಾಗಿಲ್ಲ. ಬೆಂಕಿ ಬಿದ್ದ ಸಂಗತಿ ಅಕ್ಕಪಕ್ಕದವರಿಗೆ ತಿಳಿಯುವಷ್ಟರಲ್ಲಿ ಮನೆಯಲ್ಲಿದ್ದ ಕಾಲು ಕೆಜಿಯಷ್ಟು ಬೆಳ್ಳಿ, ಒಂದು ತೊಲ ಬಂಗಾರ ಹಾಗೂ ಮನೆಯ ದುರಸ್ತಿಗಾಗಿ ಸಾಲ ಮಾಡಿ ಇಟ್ಟಿದ್ದ ಲಕ್ಷಾಂತರ ರೂಪಾಯಿ ಸುಟ್ಟು ಹೋಗಿದೆ. 

ಉಪವಿಭಾಗಾಧಿಕಾರಿ ವಿ. ಅಭಿಷೇಕ್ ಸೂಚನೆ ಮೇರೆಗೆ ತಹಶೀಲ್ದಾರ್ ಪುರಂದರ ಹೆಗಡೆ, ಕಂದಾಯ ಅಧಿಕಾರಿ ರಮೇಶ್ ಹಾಗೂ ಪುರಸಭೆಯ ಅಧಿಕಾರಿ ಪರಮೇಶ್‍ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT