ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿಶಾಲಿ ಭಾರತಕ್ಕೆ ಮೋದಿ ಆಡಳಿತ ಕಾರಣ: ಸಂಸದ

Published 29 ಫೆಬ್ರುವರಿ 2024, 15:34 IST
Last Updated 29 ಫೆಬ್ರುವರಿ 2024, 15:34 IST
ಅಕ್ಷರ ಗಾತ್ರ

ಹರಿಹರ: ಭ್ರಷ್ಟಾಚಾರ ಮುಕ್ತ, ಜನಮುಖಿ ಆಡಳಿತ ನೀಡಿ ದೇಶವನ್ನು ಸದೃಢಗೊಳಿಸಿದ ಕೀರ್ತಿ ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.

ನಗರದ ಕಾಟ್ವೆ ಭವನದಲ್ಲಿ ಬಿಜೆಪಿಯಿಂದ ಗುರುವಾರ ಆಯೋಜಿಸಿದ್ದ ಫಲಾನುಭವಿಗಳ ಸಂಪರ್ಕ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಬಲಿಷ್ಠ ಭಾರತದ ಪ್ರಜೆಗಳು ಎಂಬ ಭಾವನೆಯನ್ನು  ಭಾರತೀಯರಲ್ಲಿ ಬೆಳೆದಿದೆ. ಭಾರತ ಹಿಂದಿನಂತೆ ಶಕ್ತಿಹೀನವಲ್ಲ, ಅದು ಸಿಂಹ ಘರ್ಜನೆ ಮಾಡುತ್ತದೆ ಎಂಬ ಭಾವನೆ ಜಾಗತಿಕ ವಲಯದಲ್ಲಿ ಮೂಡಿದೆ. ಮೋದಿ ಅವರ 10 ವರ್ಷದ ಆಡಳಿತದಲ್ಲಿ ಆಗಿರುವ ಬದಲಾವಣೆಯಿದು’ ಎಂದರು.

‘ಭಾರತ ಜಗತ್ತಿನ ಗುರುವಾಗಿತ್ತು ಎಂಬುದನ್ನು ಇತಿಹಾಸದಲ್ಲಿ ಓದಿದ್ದೇವೆ. ಆ ಇತಿಹಾಸ ಮರುಕಳಿಸಿದೆ. ಇದಕ್ಕೆ ಮೋದಿ ಅವರಂತಹ ಪ್ರಧಾನಿಯಿಂದ ಸಾಧ್ಯವಾಗಿದೆ. ಮತ್ತೊಂದು ಅವಧಿಗೂ ಅವರು ಪ್ರಧಾನಿಯಾಗುವುದು ನಿಶ್ಚಿತ: ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.

ಬಡ, ಮಧ್ಯಮ ವರ್ಗದವರ ಏಳಿಗೆಗಾಗಿ ಉಜ್ವಲ, ಆಯುಷ್ಮಾನ್, ರೈತರ ಬಲವರ್ಧನೆಗೆಂದು ಹತ್ತಾರು ಯೋಜನೆಗಳನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಜಾರಿ ಮಾಡಲಾಗಿದೆ. ಇಂತಹ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯಕ್ಕಾಗಿ ಮನೆ, ಮನೆಗೆ ಸಂಪರ್ಕ ಮಾಡಲಾಗುತ್ತಿದೆ ಎಂದು ಸಂಪರ್ಕ ಅಭಿಯಾನದ ಜಿಲ್ಲಾ ಸಂಚಾಲಕ ಬಿ.ಜೆ.ಅಜಯ್ ಕುಮಾರ್ ಹೇಳಿದರು.

ಪಕ್ಷದ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ಗ್ರಾಮಾಂತರ ಘಟಕದ ಅಧ್ಯಕ್ಷ ಲಿಂಗಾರಾಜ್ ಹಿಂಡಸಘಟ್ಟ, ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಹನಗವಾಡಿ ವೀರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐರಣಿ ಅಣ್ಣೇಶ್, ಚಂದ್ರಶೇಖರ ಪೂಜಾರ್, ಸಂಪರ್ಕ ಅಭಿಯಾನದ ತಾಲ್ಲೂಕು ಸಂಚಾಲಕಿ ರೂಪಾ ಶಶಿಕಾಂತ್, ಗುಳದಹಳ್ಳಿ ಮಹಾಂತೇಶ್, ಸಹ ಸಂಚಾಲಕ ಅಮರ್, ಸುನೀಲ್ ಕುಮಾರ್, ಸಿದ್ದೇಶ್ ಕರೂರು, ಶ್ರೀಕಾಂತ್ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT