ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ದಾವಣಗೆರೆ ಎಸ್‌ಪಿಎಸ್‌ ನಗರದ 2ನೇ ಹಂತದ ಜಾಗ ತೆರವಿಗೆ ಆದೇಶ:ಆತಂಕದಲ್ಲಿ ನಿವಾಸಿಗಳು

Published : 3 ಏಪ್ರಿಲ್ 2025, 6:04 IST
Last Updated : 3 ಏಪ್ರಿಲ್ 2025, 6:04 IST
ಫಾಲೋ ಮಾಡಿ
Comments
ದಾವಣಗೆರೆಯ ಎಸ್‌ಪಿಎಸ್‌ ನಗರದ (2ನೇ ಹಂತ) ನೋಟ
ದಾವಣಗೆರೆಯ ಎಸ್‌ಪಿಎಸ್‌ ನಗರದ (2ನೇ ಹಂತ) ನೋಟ
ಎಸ್‌ಪಿಎಸ್‌ ನಗರದ ನಿವಾಸಿಗಳ ಆತಂಕ ನಿವಾರಿಸಬೇಕು. ಯಾವುದೇ ಕಾರಣಕ್ಕೂ ನಿವಾಸಿಗಳನ್ನು ತೆರವುಗೊಳಿಸಬಾರದು. ಜಾಗದ ವಿವಾದವನ್ನು ಜಿಲ್ಲಾಡಳಿತ ಬಗೆಹರಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಆವರಗೆರೆ
ವಾಸು ಕಾರ್ಮಿಕ ಮುಖಂಡ
‘ನಿವಾಸಿಗಳಿಗೆ ಆತಂಕ ಬೇಡ’
‘ನಿವಾಸಿಗಳಿಗೆ ಯಾವುದೇ ಆತಂಕ ಬೇಡ. ನಾವು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುತ್ತೇವೆ. 20–30 ವರ್ಷಗಳಿಂದ ಅಲ್ಲಿನ ನಿವಾಸಿಗಳು ಮನೆ ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಯಾವುದೇ ಕಾರಣಕ್ಕೂ ಅವರನ್ನು ತೆರವು ಮಾಡುವುದಿಲ್ಲ. ಜನರ ಪರ ನ್ಯಾಯಾಲಯದ ಮೊರೆ ಹೋಗುತ್ತೇವೆ. ಜನರು ಧೈರ್ಯದಿಂದ ಇರಬೇಕು’ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು. ‘ಜಾಗದ ಮಾಲೀಕರಿಗೆ ಬಡ್ಡಿ ಸಹಿತ ಪರಿಹಾರ ಕೊಡಲು ಸಿದ್ಧವಿದ್ದೇವೆ. ಅವರು ಒಪ್ಪುತ್ತಿಲ್ಲ. ಜನರ ಪರವಾಗಿ ವಿವಾದ ಸಂಬಂಧ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತದಿಂದ ಸುಪ್ರೀಂ ಕೋರ್ಟ್‌ಗೂ ಹೋಗಲು ಸಿದ್ಧ’ ಎಂದು ಅವರು ಸ್ಪಷ್ಟಪಡಿಸಿದರು.
‘ಕೋರ್ಟ್‌ ಆದೇಶ ಪಾಲಿಸಲಿ’
‘ನಾನು 1998ರಲ್ಲೇ 3 ಎಕರೆ ಜಾಗವ‌ನ್ನು ಖರೀದಿಸಿದ್ದೆ. ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೆ. ಆ ಕಾರಣ ತೀರ್ಪು ನಮ್ಮ ಪರವಾಗಿ ಬಂದಿದೆ. ಕೋರ್ಟ್‌ ಆದೇಶದ ಪ್ರಕಾರ ನಡೆದುಕೊಳ್ಳಿ ಎಂಬುದಷ್ಟೇ ನನ್ನ ಬೇಡಿಕೆ. ಹಲವು ಬಾರಿ ಪರ್ಯಾಯ ಜಾಗ ಕೊಡುವುದಾಗಿ ಹೇಳಿ ಜಾಗವನ್ನೂ ತೋರಿಸಿದ್ದರು. ಆದರೆ ಕೊನೆಗೆ ನೆಪ ಹೇಳಿದರು. ಸರ್ಕಾರಿ ಜಾಗ ಬಿಟ್ಟು ಖಾಸಗಿ ಮಾಲಿಕತ್ವದ ಜಾಗದಲ್ಲಿ ಆಶ್ರಯ ಕಾಲೊನಿ ನಿರ್ಮಿಸಿದ್ದು ತಪ್ಪು’ ಎಂದು ರುದ್ರೇಶ್‌ ದೂರುತ್ತಾರೆ. ‘ಜಾಗದ ಮಾಲೀಕರ ಒಪ್ಪಿಗೆ ಇಲ್ಲದೇ ಅಂದಿನ ಆಡಳಿತವೇ ಹಳೆ ಮಾಲೀಕರಿಂದ ಸಹಿ ಮಾಡಿಸಿಕೊಂಡು ಜಾಗ ಒತ್ತುವರಿ ನಡೆಸಿತ್ತು. ಇದನ್ನು ಕೋರ್ಟ್‌ ಗಮನಕ್ಕೂ ತರಲಾಗಿತ್ತು. ಈಗ ಬೇರೆ ಯಾವುದೇ ಜಾಗ ಕೊಟ್ಟರೂ ಅಭ್ಯಂತರವಿಲ್ಲ. ಅದು ನ್ಯಾಯಯುತವಾಗಿರಬೇಕು. ಅಲ್ಲಿನ ನಿವಾಸಿಗಳಿಗೆ ತೊಂದರೆ ಕೊಡುವ ಇರಾದೆ ನನಗೂ ಇಲ್ಲ’ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT