ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊದಿಗೆರೆ: ಕೆಂಚಮ್ಮ ದೇವಿಯ ಒಡವೆ ಕಳವು

Published 5 ಜೂನ್ 2024, 15:51 IST
Last Updated 5 ಜೂನ್ 2024, 15:51 IST
ಅಕ್ಷರ ಗಾತ್ರ

ಚನ್ನಗಿರಿ: ಹೊದಿಗೆರೆ ಗ್ರಾಮದ ಕೆರೆ ಕೋಡಿ ಕೆಂಚಮ್ಮ ದೇವಸ್ಥಾನದ ಬೀಗ ಮುರಿದು ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ಕಳವು ಮಾಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಮಂಗಳವಾರ ತಡರಾತ್ರಿ ದುಷ್ಕರ್ಮಿಗಳು ಕೆಂಚಮ್ಮ ದೇವಸ್ಥಾನದ ಗರ್ಭಗುಡಿಯ ಬಾಗಿಲ ಬೀಗ ಒಡೆದು ದೇವಸ್ಥಾನದ ಒಳಗೆ ನುಗ್ಗಿ ದೇವಿಯ ಮೂರ್ತಿಗೆ ಹಾಕಿದ್ದ 20 ಗ್ರಾಂ. ಮಾಂಗಲ್ಯದ ಸರ ಹಾಗೂ 2 ಕೆ.ಜಿ. ತೂಕದ ಬೆಳ್ಳಿ ಕೀರೀಟ ಮತ್ತು ಹುಂಡಿಯಲ್ಲಿದ್ದ ಹಣ ಸೇರಿ ಒಟ್ಟು ₹ 1.45 ಲಕ್ಷ ಮೌಲ್ಯದ ಆಭರಣಗಳನ್ನು ಕಳವು ಮಾಡಿದ್ದಾರೆ.

ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT