ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀರಲಿಂಗೇಶ್ವರ ಕಾರ್ತಿಕೋತ್ಸವ: ಗಮನ ಸೆಳೆದ ಕುಸ್ತಿ ಪಂದ್ಯ

Published 3 ಜನವರಿ 2024, 16:25 IST
Last Updated 3 ಜನವರಿ 2024, 16:25 IST
ಅಕ್ಷರ ಗಾತ್ರ

ಹೊನ್ನಾಳಿ: ಇಲ್ಲಿನ ಬೀರಲಿಂಗೇಶ್ವರ ದೇವರ ಕಾರ್ತಿಕೋತ್ಸವದ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಕುಸ್ತಿ ಪಂದ್ಯ ಗಮನ ಸೆಳೆಯಿತು.

ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಪಕ್ಕದ ಮೈದಾನದಲ್ಲಿ ಏರ್ಪಡಿಸಿದ್ದ ಮೂರು ದಿನಗಳ ಕುಸ್ತಿ ಪಂದ್ಯಾವಳಿಗೆ ಪೈಲ್ವಾನ್ ಎಚ್.ಬಿ. ಗಿಡ್ಡಪ್ಪ
ಬುಧವಾರ ಚಾಲನೆ ನೀಡಿದರು.

50ಕ್ಕೂ ಹೆಚ್ಚು ಪೈಲ್ವಾನರ ಸೆಣಸಾಟ ಪ್ರೇಕ್ಷಕರನ್ನು ರಂಜಿಸಿತು. ಪೈಲ್ವಾನವರು ತಮ್ಮ ಚಾಕಚಕ್ಯತೆಯಿಂದ ಎದುರಾಳಿಗಳನ್ನು ಕೆಣಕಿ ತಮ್ಮ ಪಟ್ಟುಗಳಿಂದ ಸೋಲುಣಿಸುತ್ತಿದ್ದ ರೀತಿ ಗಮನ ಸೆಳೆಯಿತು. ಪ್ರೇಕ್ಷಕರು ಸಿಳ್ಳೆ ಹೊಡೆಯುತ್ತಾ, ಚಪ್ಪಾಳೆ ತಟ್ಟುತ್ತಾ ಪೈಲ್ವಾನರನ್ನು ಹುರಿದುಂಬಿಸಿದರು.

ಕೆಲ ವಿದ್ಯಾರ್ಥಿ ಪೈಲ್ವಾನರುಗಳಿಗೆ ಹಾಗೂ ಹೊರಗಿನಿಂದ ಬಂದಂತಹ ದೊಡ್ಡ ಪೈಲ್ವಾನರಿಗೆ ಗೌರವಾರ್ಥವಾಗಿ ಪರ್ಶಿಪೈಕಿ ( ಯಾರಾದರೂ ಎದುರಾಳಿಗಳು ಮುಟ್ಟಿಕೊಂಡು ಆಡುವ ಕುಸ್ತಿ ) ಸಾರಿಸಿ ಕುಸ್ತಿ ಪಂದ್ಯಗಳನ್ನು ಆಡಲು ಕುಸ್ತಿ ಸಮಿತಿಯಿಂದ ಅವಕಾಶ ನೀಡಲಾಯಿತು.

ಉತ್ತರ ಪ್ರದೇಶದ ಮಥುರಾದ ಅನೂಜ್ ಚೌಧರಿ ಹಾಗೂ ಮಹಾರಾಷ್ಟ್ರದ ಕೊಲ್ಲಾಪುರದ ಪವನ್ ಜೋಡಿ ಸೆಣಸಾಟ ಎಲ್ಲರನ್ನೂ ರಂಜಿಸಿತು.

ಯಜಮಾನ್ ತೆಂಗಿನಮರದ ಮಾದಪ್ಪ, ಗೌಡ್ರು ನರಸಪ್ಪ, ಪರಸಣ್ಣಾರ ನರಸಿಂಹಪ್ಪ, ದೇವರ ಗಣಮಕ್ಕಳಾದ ಅಣ್ಣಪ್ಪಸ್ವಾಮಿ, ಪ್ರಭುಸ್ವಾಮಿ, ಕುಸ್ತಿ ಸಮಿತಿ ಅಧ್ಯಕ್ಷ  ಎಚ್.ಬಿ. ಅಣ್ಣಪ್ಪ, ಗೌರವಾಧ್ಯಕ್ಷ ಎನ್.ಕೆ. ಆಂಜನೇಯ, ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರವಿಗಾಳಿ, ಖಜಾಂಚಿ ಕಾಳಿಂಗಪ್ಪ, ರೆಫ್ರಿಗಳಾದ ಪೈಲ್ವಾನ್ ಸಿದ್ದಪ್ಪ, ಪೈಲ್ವಾನ್ ವಾಜೀದ್, ಮುಖಂಡರಾದ ಎಚ್.ಡಿ. ವಿಜೇಂದ್ರಪ್ಪ, ಬನಪ್ಪಾರ ಮಾದಪ್ಪ, ಕಾಟ್ಯಾ ಕುಮಾರ್, ಗುಡ್ಡಜ್ಜಿ ಬೂದೆಪ್ಪ, ತಮ್ಮಣ್ಣ, ಎಂ. ವಾಸಪ್ಪ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

ಹೊನ್ನಾಳಿಯಲ್ಲಿ ಬುಧವಾರ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಉತ್ತರ ಪ್ರದೇಶದ ಅನೂಜ್ ಚೌಧರಿ ಕೊಲ್ಲಾಪುರದ ಪವನ್ ಅವರನ್ನು ಮಣಿಸಿ ವಿಜೇತರಾದರು
ಹೊನ್ನಾಳಿಯಲ್ಲಿ ಬುಧವಾರ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಉತ್ತರ ಪ್ರದೇಶದ ಅನೂಜ್ ಚೌಧರಿ ಕೊಲ್ಲಾಪುರದ ಪವನ್ ಅವರನ್ನು ಮಣಿಸಿ ವಿಜೇತರಾದರು
3ಇಪಿ : 4ಇಪಿ : ದಾವಣಗೆರೆ ಜಿಲ್ಲೆಯ ಬಾತಿ ಹಾಗೂ ಅರಸಿಕೆರೆಯ ಪೈಲ್ವಾನರಿಬ್ಬರು ಸೆಣಸಾಡುತ್ತಿರುವ ವಿವಿಧ ಭಂಗಿಗಳು 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT