ಸೋಮವಾರ, ಜನವರಿ 20, 2020
19 °C
ಸಚಿವ ಸಿ.ಸಿ. ಪಾಟೀಲ ಪ್ರಶ್ನೆ

ಪೌರತ್ವ ವಿರೋಧಕ್ಕೆ ಸಿದ್ದರಾಮಯ್ಯ, ಕುಮಾರಸ್ವಾಮಿಯಲ್ಲಿ ಕಾರಣವಿದೆಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಿಹರ: ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸುತ್ತಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಯಾವ ಕಾರಣಕ್ಕೆ ವಿರೋಧಿಸುತ್ತಿದ್ದಾರೆ ಎಂಬುದಕ್ಕೆ ಅವರಲ್ಲಿ ಉತ್ತರ ಇದೆಯೇ ಎಂದು ಸಚಿವ ಸಿ.ಸಿ. ಪಾಟೀಲ ಪ್ರಶ್ನಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾರಣವಿಲ್ಲದೆ ಕಾಯ್ದೆ ಬಗ್ಗೆ ಜನರನ್ನು ತಪ್ಪುದಾರಿಗೆ ಎಳೆಯುವ ಕೆಲಸವನ್ನು ಇಬ್ಬರು ಮಾಡುತ್ತಿದ್ದಾರೆ. ಕಾಯ್ದೆ ಪೌರತ್ವ ಕೊಡುವುದೇ ಹೊರತು ಕಿತ್ತುಕೊಳ್ಳುವುದು ಅಲ್ಲ’ ಎಂದು ಹೇಳಿದರು.

ಮಂಗಳೂರು ಗಲಭೆ ಕುರಿತು ಹಲವು ಸಿ.ಡಿ.ಗಳಿವೆ ಎಂದು ಹೇಳಿರುವ ಕುಮಾರಸ್ವಾಮಿ ಅವರ ಎಷ್ಟನೇ ಸಿ.ಡಿ. ಇದು. ಅವರು ಸಿ.ಡಿ. ಬಿಡುಗಡೆ ಮಾಡಲಿ. ಅದಕ್ಕೆ ರಾಜ್ಯ ಸರ್ಕಾರ ಉತ್ತರ ನೀಡಲಿದೆ. ಗಲಭೆ ಪೂರ್ವನಿಯೋಜಿತ, ಯಾರು ಕಾರಣ ಎಂದು ಎಲ್ಲರಿಗೂ ತಿಳಿದಿದೆ ಎಂದು ಅವರು ತಿರುಗೇಟು ನೀಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು