ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡರನಾಯ್ಕನಹಳ್ಳಿ: ಹೊಳೆ ಸಿರಿಗೆರೆ ಕ್ರಾಸ್ ಬಳಿ ಔಷಧ ಬಾಟಲ್‌ಗಳ ರಾಶಿ

Published 9 ಮೇ 2024, 15:21 IST
Last Updated 9 ಮೇ 2024, 15:21 IST
ಅಕ್ಷರ ಗಾತ್ರ

ಕಡರನಾಯ್ಕನಹಳ್ಳಿ: ಸಮೀಪದ ಹೊಳೆ ಸಿರಿಗೆರೆ ಕ್ರಾಸ್ ಬಳಿ ಔಷಧ ಬಾಟಲ್‌ಗಳ ರಾಶಿ ಕಂಡುಬಂದಿದೆ.

ಖಾಲಿ ಬಾಟಲ್‌ಗಳನ್ನು ಚೀಲದಲ್ಲಿ ತಂದು ಇಲ್ಲಿ ಸುರಿಯಾಗಿದೆ. ಗಾಜಿನ ಬಾಟಲ್‌ಗಳು ಒಡೆದು ಚೂರಾದರೆ ಇಲ್ಲಿ ಓಡಾಡುವವರಿಗೆ ತೊಂದರೆಯಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. 

‘ಇವು ಸರ್ಕಾರಿ ಆಸ್ಪತ್ರೆಗೆ ಸೇರಿದವುಗಳಲ್ಲ. ಯಾವುದೋ ಖಾಸಗಿ ವೈದ್ಯರಿಗೆ ಸಂಬಂಧಿಸಿವೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಅವುಗಳನ್ನು ಸಂಗ್ರಹಿಸಿದ್ದೇವೆ. ಹೀಗೆ ಎಲ್ಲೆಂದರಲ್ಲಿ ಔಷಧ ಬಾಟಲ್‌ಗಳನ್ನು ಎಸೆಯಬಾರದು’ ಎಂದು ಹೊಳೆ ಸಿರಿಗೆರೆ ವೈದ್ಯಾಧಿಕಾರಿ ಡಾಕ್ಟರ್ ಚೇತನ್ ಮತ್ತು ತಾಲೂಕು ಆರೋಗ್ಯ ನಿರೀಕ್ಷಕ ಎಂ ಉಮ್ಮಣ್ಣ ಹೇಳಿದ್ದಾರೆ. 

‘ಇವು ಯಾವ ಕಂಪನಿಗೆ ಸೇರಿವೆ ಹಾಗೂ ಯಾವ ವೈದ್ಯರಿಗೆ ಸರಬರಾಜಾಗಿವೆ ಎಂಬುದನ್ನು ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಅವರು ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT