ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುರುವ ಗಡ್ಡೆ ರಾಮೇಶ್ವರ: ಮೂರು ದಶಕಗಳಿಂದ ಮುಸ್ಲಿಂ ಕುಟುಂಬದ ಪೂಜೆ

Published 10 ಏಪ್ರಿಲ್ 2024, 15:35 IST
Last Updated 10 ಏಪ್ರಿಲ್ 2024, 15:35 IST
ಅಕ್ಷರ ಗಾತ್ರ

ಕುರುವ(ನ್ಯಾಮತಿ): ತಾಲ್ಲೂಕಿನ ಕುರುವ ಗಡ್ಡೆ ರಾಮೇಶ್ವರ ದೇವಸ್ಥಾನದ ದುರ್ಗಾದೇವಿಗೆ ಭದ್ರಾವತಿ ತಾಲ್ಲೂಕಿನ ಸಿದ್ಲಿಪುರ ಗ್ರಾಮದ ಮುಸ್ಲಿಂ ಸಮುದಾಯದ ಕುಟುಂಬದವರು ಮೂರು ದಶಕಗಳಿಂದ ಪೂಜೆ ಸಲ್ಲಿಸುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.

‘ಪ್ರತಿ ವರ್ಷ ಯುಗಾದಿಯಂದು ನಡೆಯುವ ಗಡ್ಡೆ ರಾಮೇಶ್ವರ ರಥೋತ್ಸವಕ್ಕೆ ಮೂರು ದಶಕಗಳಿಂದ ಬರುತ್ತಿದ್ದೇವೆ. ನಮ್ಮ ತಾಯಿಯವರಿಗೆ ಆರೋಗ್ಯ ಸರಿ ಇಲ್ಲದ ಸಮಯದಲ್ಲಿ ದುರ್ಗಾದೇವಿಗೆ ಹರಕೆ ಹೊತ್ತಿದ್ದರಿಂದ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿತು. ವ್ಯಾಪಾರ, ವ್ಯವಹಾರಗಳು ಚೆನ್ನಾಗಿ ನಡೆಯುತ್ತಿದೆ. ಹಾಗಾಗಿ ಪ್ರತಿವರ್ಷ ದೇವಿಗೆ ಬೆಳ್ಳಿ ತೊಟ್ಟಿಲು, ತಾಳಿ, ಕಣ್ಣುಗಳನ್ನು ಹರಕೆ ರೂಪದಲ್ಲಿ ಅರ್ಪಿಸುತ್ತಿದ್ದೇವೆ’ ಎಂದು ಸಿದ್ಲಿಪುರ ಗ್ರಾಮದ ಭಕ್ತ ಆರಿಫ್‌ ಉಲ್ಲಾ, ಅವರ ತಾಯಿ ಪ್ಯಾರಿಜಾನ್ ಮತ್ತು ಕುಟುಂಬದವರು ತಿಳಿಸಿದರು.

ಪ್ರತಿವರ್ಷ ತಪ್ಪದೇ ರಥೋತ್ಸವಕ್ಕೆ ಆಗಮಿಸಿ ಬಂದು ಪೂಜೆ ನೆರವೇರಿಸಿ, ಹರಕೆ ಸಲ್ಲಿಸುತ್ತಾರೆ. ದೇವಿಯ ಮೇಲೆ ಅಪಾರ ಭಕ್ತಿ, ನಂಬಿಕೆ ಹೊಂದಿದ್ದಾರೆ ಎಂದು ಕುರುವ ಗಡ್ಡೆ ರಾಮೇಶ್ವರ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಸುರೇಶ ನವುಲೆ, ಆರ್ಚಕ ಕುಮಾರಭಟ್ಟರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT