ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಗಿರಿ: ಸಾಹಿತಿ ಬಿ. ಪಾಂಡುರಂಗಯ್ಯ ನಿಧನ

Published 5 ಮೇ 2024, 7:04 IST
Last Updated 5 ಮೇ 2024, 7:04 IST
ಅಕ್ಷರ ಗಾತ್ರ

ಚನ್ನಗಿರಿ: ತಾಲ್ಲೂಕು ಬುಳುಸಾಗರದ ಗ್ರಾಮದ ವಾಸಿ, ಸಾಹಿತಿ ಬಿ. ಪಾಂಡುರಂಗಯ್ಯ (84) ಅನಾರೋಗ್ಯದಿಂದ ಬೆಂಗಳೂರಿನಲ್ಲಿ ಶುಕ್ರವಾರ ರಾತ್ರಿ ನಿಧನರಾದರು. 

ಮೃತರಿಗೆ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಮೃತರ ಅಂತ್ಯಕ್ರಿಯೆ ದಾವಣಗೆರೆಯಲ್ಲಿ ಶನಿವಾರ ನೆರವೇರಿತು.

ಪಾಂಡುರಂಗಯ್ಯ ಅವರು ‘ಮಣಿಮೇಖಲೆ’, ‘ಶಂಭುಕನ ವಧೆ’ ಎಂಬ ಎರಡು ಕಥಾ ಸಂಕಲನ ಹಾಗೂ ‘ಗಿಣಿರಾಮ ತಂದ ಮಾವಿನಹಣ್ಣು’ ಎಂಬ ಮಕ್ಕಳ ಕಥಾ ಸಂಕಲನಗಳನ್ನು ಬರೆದಿದ್ದಾರೆ. ಪತ್ರಿಕೆಗಳಲ್ಲಿ ಇವರು ಬರೆದ ಮಕ್ಕಳ ಕಥೆಗಳು ಪ್ರಕಟಗೊಂಡಿವೆ.

ಚನ್ನಗಿರಿ ತಾಲ್ಲೂಕಿನ ಬುಳುಸಾಗರ ಗ್ರಾಮದಲ್ಲಿ ಜನಿಸಿದ ಇವರು, ಬೆಸ್ಕಾಂ ನೌಕರರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿ ದಾವಣಗೆರೆಯಲ್ಲಿ ವಾಸವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT