ಶನಿವಾರ, ಆಗಸ್ಟ್ 24, 2019
21 °C

ಅಂತರ್ ಜಿಲ್ಲಾ ಬೈಕ್‍ ಕಳವು ಆರೋಪಿ ಸೆರೆ

Published:
Updated:
Prajavani

ಹರಿಹರ: ತುಮಕೂರು ಜಿಲ್ಲೆಯ ಶಿರಾ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಹಾಗೂ ದಾವಣಗೆರೆ ಜಿಲ್ಲೆಯ ಹರಿಹರ ಸುತ್ತಮುತ್ತ ಬೈಕ್‌ಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಗುರುವಾರ ಹರಿಹರ ನಗರ ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಜಿಲ್ಲೆಯ ಶಿರಾದ ಶೇಖ್‍ ವಾಜೀದ್‍ (30) ಬಂಧಿತ ಆರೋಪಿ. ಈತನಿಂದ ₹ 1.5 ಲಕ್ಷ ಮೌಲ್ಯದ 5 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಶೇಖ್‍ ವಾಜೀದ್‍ ಮೆಕ್ಯಾನಿಕ್‍ ಕೆಲಸ ಮಾಡುತ್ತಿದ್ದು, ಕಳವು ಮಾಡಿದ ಬೈಕ್‍ಗಳ ಬಿಡಿ ಭಾಗಗಳನ್ನು ಮಾರಾಟ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸ್‍ ಸಿಬ್ಬಂದಿಗೆ ಜಿಲ್ಲಾ ಪೊಲೀಸ್‍ ವರಿಷ್ಠಾಧಿಕಾರಿ ಆರ್‍. ಚೇತನ್‌ ನಗದು ಬಹುಮಾನ ಘೋಷಿಸಿದ್ದಾರೆ.

Post Comments (+)