ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಟ್ಟಡ ನಿರ್ಮಾಣ ಕಾರ್ಯಗಳಿಗೆ ನೀರು ಬಳಸದಂತೆ ಸೂಚನೆ

Published 14 ಮಾರ್ಚ್ 2024, 7:29 IST
Last Updated 14 ಮಾರ್ಚ್ 2024, 7:29 IST
ಅಕ್ಷರ ಗಾತ್ರ

ದಾವಣಗೆರೆ: ಭದ್ರಾ ನಾಲೆಯಲ್ಲಿ ನೀರಿನ ಹರಿವು ನಿಲ್ಲಿಸಿರುವುದರಿಂದ ಕಟ್ಟಡ ನಿರ್ಮಾಣ ಸೇರಿದಂತೆ ಹಲವು ಕಾರ್ಯಗಳಿಗೆ ನೀರನ್ನು ಬಳಸದಂತೆ ಮಹಾನಗರ ಪಾಲಿಕೆ ನಿರ್ಬಂಧ ವ್ಯಕ್ತಪಡಿಸಿದೆ.

ಬೇಸಿಗೆ ಹಿನ್ನೆಲೆಯಲ್ಲಿ ನಗರದಲ್ಲಿ ಉಷ್ಣಾಂಶ ಏರುತ್ತಿದ್ದು, ಕಳೆದ ಮಳೆಗಾಲದಲ್ಲಿ ಮಳೆಯ ಕೊರತೆಯಿಂದಾಗಿ ಅಂತರ್ಜಲ ಕುಸಿದಿದೆ. ‌ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತಿದ್ದು, ಫೆ.28ರಿಂದ ಭದ್ರಾ ನಾಲೆಯಲ್ಲಿ ನೀರಿನ ಹರಿವು ನಿಲ್ಲಿಸಿರುವುದರಿಂದ ನಗರಕ್ಕೆ ಕೆಲವೇ ದಿನಗಳಿಗೆ ಮಾತ್ರ ನೀರು ಸರಬರಾಜು ಮಾಡುವುದಕ್ಕೆ ಲಭ್ಯವಿದೆ. ಆದ್ದರಿಂದ ನಗರದಲ್ಲಿ ನೀರು ಪೋಲು ಮಾಡುವುದನ್ನು ತಡೆಗಟ್ಟುವುದು ಅವಶ್ಯಕ ಎಂದು ಮನಗಂಡು ಕುಡಿಯುವ ನೀರನ್ನು ಸಾರ್ವಜನಿಕರು ಮಿತವಾಗಿ ಬಳಸಬೇಕು. ನಾಗರೀಕರು ನಲ್ಲಿಯ ನೀರನ್ನು ಕುಡಿಯುವುದಕ್ಕೆ ಉಪಯೋಗಿಸಬೇಕು.

ವಾಹನ ಸ್ವಚ್ಛತೆ, ಕೈತೋಟ, ಮನೋರಂಜನಾ ಕಾರಂಜಿ, ಸಿನಿಮಾ ಮಂದಿರ ಹಾಗೂ ವಾಣಿಜ್ಯ ಕಟ್ಟಡಗಳಲ್ಲಿ ಕುಡಿಯಲು ಹಾಗೂ ಇತರೆ ಬಳಕೆಗೆ ರಸ್ತೆ ಸ್ವಚ್ಛತೆಗೆ ಹಾಗೂ ಇತರೆ ಉದ್ದೇಶಕ್ಕೆ ಕುಡಿಯುವ ನೀರನ್ನು ಬಳಸದಂತೆ ದಿನನಿತ್ಯ ಗೃಹ ಬಳಕೆಗೆ ಬೊರ್‌ವೆಲ್ ನೀರನ್ನು ಉಪಯೋಗಿಸುವಂತೆ ಮಹಾನಗರಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT