ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ನಾಡಿನ ಹಿರಿಯ ಸಾಹಿತಿಗಳ ಸ್ಮರಣೆ ನಡೆಯಲಿ’

Published 29 ಫೆಬ್ರುವರಿ 2024, 15:36 IST
Last Updated 29 ಫೆಬ್ರುವರಿ 2024, 15:36 IST
ಅಕ್ಷರ ಗಾತ್ರ

ನ್ಯಾಮತಿ: ನಾಡಿನ ಸಾಹಿತಿಗಳ ಸ್ಮರಣೆ ಕಾರ್ಯಕ್ರಮ ಅಗತ್ಯವಾಗಿ ನಡೆಯಬೇಕಿದೆ ಎಂದು ಹೊನ್ನಾಳಿಯ ಹಿರಿಯ ಸಾಹಿತಿ ಯು.ಎನ್.ಸಂಗನಾಳಮಠ ಹೇಳಿದರು.

ಪಟ್ಟಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹೊರತಂದಿರುವ 2024ನೇ ಇಸವಿಯ ಸವಿಗನ್ನಡ ದಿನದರ್ಶಿಕೆಯನ್ನು ಗುರುವಾರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕೆಲವು ಸಾಹಿತಿಗಳ ಮನೆಗಳು ಗುರುತು ಸಿಗದಂತಾಗಿದ್ದರೆ, ಮತ್ತೇ ಕೆಲವು ಸಾಹಿತಿಗಳ ಮನೆಗಳು ವಾಣಿಜ್ಯ ಕೇಂದ್ರಗಳಾಗಿವೆ ಎಂದು ವಿಷಾದಿಸಿದರು.

ಸವಿಗನ್ನಡ ದಿನದರ್ಶಿಕೆಯ ಮೂಲಕ ಪ್ರತಿಯೊಬ್ಬರ ಮನೆಯಲ್ಲೂ ಕನ್ನಡ ಅಂಕಿಗಳ ದರ್ಶನವಾಗಬೇಕು ಎಂದು ಸಾಹಿತಿಗಳಾದ ಸಾಸ್ವೇಹಳ್ಳಿ ಕೆ.ಪಿ.ದೇವೇಂದ್ರಯ್ಯ, ಹೊನ್ನಾಳಿ ಡಿ.ಶಿವರುದ್ರಪ್ಪ ಹೇಳಿದರು. 

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಿ.ಗಣೇಶರಾವ್, ನಾಮನಿರ್ದೇಶಿತ ಸದಸ್ಯ ಪ್ರಾಂಶುಪಾಲ ವಿ.ಪಿ.ಪೂರ್ಣಾನಂದ, ನಿವೃತ್ತ ಉಪತಹಶೀಲ್ದಾರ್ ನ್ಯಾಮತಿ ನಾಗರಾಜಪ್ಪ, ಪತ್ರಿಕೆ ಸಂಪಾದಕ ಅರುಣಕುಮಾರ ಮಾಸಡಿ, ಶಿವ ಬ್ಯಾಂಕ್ ಅಧ್ಯಕ್ಷ ಚಂದ್ರೇಗೌಡ, ಬೆಳಗುತ್ತಿ ಹೋಬಳಿ ಘಟಕದ ಅಧ್ಯಕ್ಷ ಕವಿರಾಜ, ಗೋವಿನಕೋವಿ ಘಟಕದ ಅಧ್ಯಕ್ಷ ಡಿ.ಜಿ.ಆನಂದ, ನಿಕಟಪೂರ್ವ ಅಧ್ಯಕ್ಷ ಜಿ.ನಿಜಲಿಂಗಪ್ಪ, ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಕೆ.ಬೋಜರಾಜ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ವನಜಾಕ್ಷಮ್ಮ, ಗೌರವ ಕಾರ್ಯದರ್ಶಿಗಳಾದ ಎಸ್.ಜಿ.ಬಸವರಾಜಪ್ಪ, ಬಿ.ಜಿ.ಚೈತ್ರಾ, ಸಂಘಟನಾ ಕಾರ್ಯದರ್ಶಿ ಎಂ.ಎಸ್.ಜಗದೀಶ, ಎಂ.ಲೋಕೇಶ್ವರಯ್ಯ, ವೆಂಕಟೇಶನಾಯ್ಕ, ಚಂದನ ಜಂಗ್ಲಿ, ಮುರುಡಪ್ಪ, ಗ್ರಂಥಪಾಲಕಿ ಸುಮಲತಾ, ಬಳೆಗಾರ ಕವಿತಾ, ವರ್ತಕ ಹೊಮ್ಮರಡಿ ಕಾಂತರಾಜ, ಆರುಂಡಿ ನಾಗರಾಜಪ್ಪ, ಮಂಜಪ್ಪ, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಕನ್ನಡ ಅಜೀವ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT