ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಘವೇಂದ್ರ ಸಪ್ತಾಹ: ನಗರದಲ್ಲಿ ಬೈಕ್ ರ‍್ಯಾಲಿ

Published 10 ಮಾರ್ಚ್ 2024, 6:00 IST
Last Updated 10 ಮಾರ್ಚ್ 2024, 6:00 IST
ಅಕ್ಷರ ಗಾತ್ರ

ದಾವಣಗೆರೆ: ಮಾ. 11ರಿಂದ 17ರವರೆಗೆ ನಡೆಯಲಿರುವ 31ನೇ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವ ಅಂಗವಾಗಿ ನಗರದಲ್ಲಿ ಶನಿವಾರ ಬೈಕ್ ರ‌್ಯಾಲಿ ನಡೆಯಿತು.

ಮಹೋತ್ಸವ ಸಮಿತಿ ಅಧ್ಯಕ್ಷ ಸಂಪನ್ನ ಮುತಾಲಿಕ್, ರಾಂ ಆ್ಯಂಡ್ ಕೋ ವೃತ್ತದಲ್ಲಿ ರ‌್ಯಾಲಿಗೆ ಚಾಲನೆ ನೀಡಿದರು. ನಗರದಲ್ಲಿ ಸಂಚರಿಸಿದ ರಾಯರ ಭಕ್ತರು, ರಾಘವೇಂದ್ರ ಸ್ವಾಮಿಗಳ ಸ್ಮರಣೆ, ಜೈ ಶ್ರೀರಾಮ್ ಘೋಷಣೆ ಕೂಗುವ ಮೂಲಕ ಸಪ್ತಾಹ ಮಹೋತ್ಸವ ಕುರಿತು ಜಾಗೃತಿ ಮೂಡಿಸಿದರು. ಬೈಕ್‌ಗಳಿಗೆ ರಾಯರ ಭಾವಚಿತ್ರವಿರುವ ಧ್ವಜಗಳನ್ನು ಕಟ್ಟಲಾಗಿತ್ತು.

ರ‌್ಯಾಲಿಯು ನಿಜಲಿಂಗಪ್ಪ ಬಡಾವಣೆ, ರಿಂಗ್ ರಸ್ತೆ ಮೂಲಕ ಪಿಬಿ ರಸ್ತೆಯಲ್ಲಿ ಸಾಗಿ, ಅರುಣಾ ಟಾಕೀಸ್ ವೃತ್ತ, ಪಿಜೆ ಬಡಾವಣೆ ರಾಘವೇಂದ್ರ ಸ್ವಾಮಿಗಳ ಮಠದ ಮಾರ್ಗವಾಗಿ ಎವಿಕೆ ಕಾಲೇಜು ರಸ್ತೆಯಿಂದ ಕೆಇಬಿ ವೃತ್ತ, ಶಿವಪ್ಪಯ್ಯ ಸರ್ಕಲ್, ಕೆಬಿ ಬಡಾವಣೆಯಲ್ಲಿ ಹಾದು ಹೋಗಿ, ಮಹಾತ್ಮ ಗಾಂಧಿ ಸರ್ಕಲ್ ಮೂಲಕ ತೆರಳಿ ರಾಘವೇಂದ್ರ ಸ್ವಾಮಿಗಳ ಮಠದ ಬಳಿ ಮುಕ್ತಾಯವಾಯಿತು.

ನಂತರ ಕೆಬಿ ಬಡಾವಣೆ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಾತನಾಡಿದ ಮಹೋತ್ಸವ ಸಮಿತಿಯ ಕಾರ್ಯದರ್ಶಿ ಕಂಪ್ಲಿ ಗುರುರಾಜಾಚಾರ್, ‘ಸೋಮವಾರದಿಂದ 7 ದಿನಗಳ ಕಾಲ ನಗರದಲ್ಲಿ ನಡೆಯಲಿರುವ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವದಲ್ಲಿ ಎಲ್ಲರೂ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಬೇಕು’ ಎಂದು ಮನವಿ ಮಾಡಿದರು.

ಮಹೋತ್ಸವ ಸಮಿತಿಯ ಕೋಶಾಧ್ಯಕ್ಷ ಡಾ.ಎಂ.ಸಿ. ಶಶಿಕಾಂತ್, ಸಹ ಕಾರ್ಯದರ್ಶಿಗಳಾದ ಎನ್.ಆರ್. ನಾಗಭೂಷಣರಾವ್, ಸತ್ಯಬೋಧ ಕುಲಕರ್ಣಿ, ಪಲ್ಲಕ್ಕಿ ವಾಸುದೇವಾಚಾರ್, ಕೆ. ರಘುನಾಥರಾವ್, ನಾಗರಾಜರಾವ್, ವಾಚಸ್ಪತಿ, ರಾಜಣ್ಣ, ಪ್ರಾಣೇಶಾಚಾರ್ ಕಡೂರು, ಮಣ್ಣೂರ್ ಗುರುರಾಜಾಚಾರ್, ಸರಯೂ ಮುತಾಲಿಕ್, ಗೀತಾ ಗುರುರಾಜಾಚಾರ್, ರೂಪಶ್ರೀ ಶಶಿಕಾಂತ್ ಭಾಗವಹಿಸಿದ್ದರು.

ಪಿ.ಸಿ. ರಾಮನಾಥ್, ಅನಿಲ್ ಬಾರಂಗಳ್, ಮಾಧವ ಪದಕಿ, ಶೇಷಾಚಲ, ಎಂ.ಜಿ. ಶ್ರೀಕಾಂತ್, ರಮೇಶ ಜಹಗೀರದಾರ್, ಅನಂತ ಪದ್ಮನಾಭ, ಪಿ.ಸಿ. ಶ್ರೀನಿವಾಸ್, ಗುರುರಾಜ ಕಡ್ಲೇಬಾಳ್, ರಾಮಚಂದ್ರರಾವ್, ಶಾನುಭೋಗ ರಾಮರಾವ್ ಪಾಲ್ಗೊಂಡಿದ್ದರು.

ಬೈಕ್ ರ‌್ಯಾಲಿಗೂ ಮುನ್ನ ರಾಮ್ ಆ್ಯಂಡ್ ಕೋ ವೃತ್ತದಲ್ಲಿ ಸೇರಿದ ವಿವಿಧ ಭಜನಾ ಮಂಡಳಿಗಳ ಸದಸ್ಯರು ದೇವರ ನಾಮಗಳನ್ನು ಹಾಡಿ ಭಕ್ತಿ ಸಮರ್ಪಿಸಿದರು. ನಂದಕಿಶೋರ ಭಜನಾ ಮಂಡಳಿ, ಭಾರತಿ ಭಜನಾ ಮಂಡಳಿ, ವಾಸವಿ ಯುವತಿಯರ ಭಜನಾ ಮಂಡಳಿ, ರಾಜರಾಜೇಶ್ವರಿ ಭಜನಾ ಮಂಡಳಿ, ಕಾಳಿಕಾಂಬಾ ಭಜನಾ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು.

ಸುಶಮೀಂದ್ರ, ನಾಗರಾಜರಾವ್ ಮತ್ತು ಪೃಥ್ವಿ ಅವರು ಚಂಡೆ ವಾದ್ಯ ನುಡಿಸಿದ್ದು ರ‌್ಯಾಲಿಯ ಕಳೆಯನ್ನು ಹೆಚ್ಚಿಸಿತು. ರಾಯರ ಭಕ್ತರು ಉತ್ಸಾಹ, ಸಂಭ್ರಮದಿಂದ ರ‌್ಯಾಲಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT