ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಉಲ್ಲಂಘನೆ: ಎಟಿಎಂಗೆ ಹಾಕಲು ತಂದ ₹ 73.98 ಲಕ್ಷ ಜಪ್ತಿ

Published 31 ಮಾರ್ಚ್ 2024, 14:18 IST
Last Updated 31 ಮಾರ್ಚ್ 2024, 14:18 IST
ಅಕ್ಷರ ಗಾತ್ರ

ನ್ಯಾಮತಿ: ನಿಯಮ ಉಲ್ಲಂಘನೆ ಸಂಬಂಧ ಪಟ್ಟಣದ ವಿವಿಧ ಬ್ಯಾಂಕ್‌ಗಳ ಎಟಿಎಂಗೆ ಹಣ ತುಂಬಲು ಬಂದಿದ್ದ ವಾಹನವನ್ನು ಶನಿವಾರ ವಶಪಡಿಸಿಕೊಂಡಿರುವ ಪೊಲೀಸರು ಅದರಲ್ಲಿದ್ದ ₹ 73.98 ಲಕ್ಷವನ್ನು ಜಪ್ತಿ ಮಾಡಿದ್ದಾರೆ.

ಸಿಎಂಎಸ್ ಕಂಪನಿಯ ವಾಹನ ಹಣ ತುಂಬುವ ಅವಧಿ ಉಲ್ಲಂಘನೆ ಮಾಡಿದೆ. ಸಾಮಾನ್ಯವಾಗಿ ಸಂಜೆ 5.30 ರ ಒಳಗೆ ಎಟಿಎಂಗೆ ಹಣ ತುಂಬಬೇಕು ಎಂಬ ನಿಯಮ ಇದೆ. ಆದರೆ ಸಿಎಂಎಸ್ ಕಂಪನಿಯ ವಾಹನ 6.30ರವರೆಗೂ ಪಟ್ಟಣದಲ್ಲಿ ಸಂಚರಿಸುತ್ತಿತ್ತು. ಈ ಕಾರಣ ವಾಹನ ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಎನ್.ಎಸ್. ರವಿ ತಿಳಿಸಿದರು.

ಸಬ್‌ ಇನ್‌ಸ್ಪೆಕ್ಟರ್ ಪ್ರವೀಣ, ಹೆಡ್ ಕಾನ್‌ಸ್ಟೆಬಲ್ ಮಂಜಪ್ಪ, ಚುನಾವಣಾ ತನಿಖಾ ದಳದ ಅಧಿಕಾರಿ ಮಾಲತೇಶ ಮತ್ತು ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT