ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಯಾಸಿನಕೆರೆ: ಬಸವ ಜಯಂತಿಯ ಪ್ರಯುಕ್ತ ಎತ್ತಿನ ಮೆರವಣಿಗೆ

Published 10 ಮೇ 2024, 16:17 IST
Last Updated 10 ಮೇ 2024, 16:17 IST
ಅಕ್ಷರ ಗಾತ್ರ

ಸಾಸ್ವೆಹಳ್ಳಿ: ಸಮೀಪದ ಕ್ಯಾಸಿನಕೆರೆ ಗ್ರಾಮದ ಶಿವಶರಣ ಬಸವ ಸಮಿತಿಯವರು 6ನೇ ವರ್ಷದ ಬಸವ ಜಯಂತ್ಯುತ್ಸವ ಪ್ರಯುಕ್ತ ಸಡಗರ ಸಂಭ್ರಮದಿಂದ ಎತ್ತಿನ ಮೆರವಣಿಗೆ ನಡೆಸಿದರು. ಶಿವಶರಣ ಬಸವ ಸಮಿತಿ ಗೌರವ ಅಧ್ಯಕ್ಷ ದೇವೇಂದ್ರಪ್ಪ ಎತ್ತಿನ ಮೆರವಣಿಗೆಗೆ ಚಾಲನೆ ನೀಡಿದರು.

ದಿಗ್ಗೇನಹಳ್ಳಿಯ ವಿಷ್ಣು ದಾದಾ, ಶಶಿಕುಮಾರ ಹಾಗೂ ನರಸಿಂಹ ಅವರು ತಮಿಳುನಾಡಿನಿಂದ ₹1.20 ಲಕ್ಷ ನೀಡಿ ಖರೀದಿಸಿ ತಂದಿದ್ದ ತಲಾ ಒಂದೊಂದು ಹೋರಿಗಳು ಮೆರವಣಿಗೆಗೆ ಮೆರುಗು ತಂದವು. ಕಳೆದ ವರ್ಷ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಗಳಲ್ಲಿ ಈ ಎತ್ತುಗಳು ಭಾಗಿಯಾಗಿದ್ದವು. 

ಬಸವೇಶ್ವರರ ಮೆರವಣಿಗೆಯಲ್ಲಿ ಭದ್ರಾವತಿ, ಹೊನ್ನಾಳಿ ಸೇರಿದಂತೆ ವಿವಿಧೆಡೆಯಿಂದ ಬಂದಿದ್ದ ಹದಿನೈದು ಜೊತೆ ಎತ್ತುಗಳು ರಾಜ ಬೀದಿಯಲ್ಲಿ ಮೆರವಣಿಗೆಯಲ್ಲಿ ಸಾಗಿದವು. 

ಕಾರ್ಯಕ್ರಮದಲ್ಲಿ ಶಿವಶರಣ ಬಸವ ಸಮಿತಿಯ ಅಧ್ಯಕ್ಷ ಪವನ್ ಬಿ.ಡಿ., ಉಪಾಧ್ಯಕ್ಷ ಕೆ.ಜಿ ಪ್ರದೀಪ್, ಕಾರ್ಯದರ್ಶಿ ರುದ್ರೇಶ್ ಎಂ ಬಿ, ಪದಾಧಿಕಾರಿಗಳಾದ ಬಿ.ವಿ ಸಂತೋಷ, ಬಸವನಗೌಡ, ಚಂದ್ರಶೇಖರ್,ರವಿ, ಮನೋಜ್, ಕೆ.ಜಿ ಬೀರೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT