ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿ ಕಾಳಗ: ಆಯೋಜಕರ ವಿರುದ್ಧ ದೂರು ದಾಖಲು

Published 19 ಮಾರ್ಚ್ 2024, 14:11 IST
Last Updated 19 ಮಾರ್ಚ್ 2024, 14:11 IST
ಅಕ್ಷರ ಗಾತ್ರ

ದಾವಣಗೆರೆ: ನಗರ ದೇವತೆ ದುರ್ಗಾಂಬಿಕಾ ಜಾತ್ರೆಯ ಪ್ರಯುಕ್ತ ದಾವಣಗೆರೆ ದೇವರಾಜ ಅರಸ್ ಬಡಾವಣೆ, “ಬಿ” ಬ್ಲಾಕ್ ನಲ್ಲಿರುವ ಸಾರ್ವಜನಿಕ ಆಟದ ಮೈದಾನದಲ್ಲಿ ಕುರಿಕಾಳಗ ಆಯೋಜಿಸಿರುವುದಕ್ಕೆ ದುರ್ಗಾಂಬಿಕಾ ದೇವಸ್ಥಾನ ಧರ್ಮದರ್ಶಿಗಳ ಟ್ರಸ್ಟ್‌, ಕುರಿ ಕಾಳಗದ ಸಮಿತಿಯ ಆಯೋಜಕರ ವಿರುದ್ಧ ಬಸವನಗರ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ.

‘ಕುರಿ ಕಾಳಗ ನಡೆಸುವುದು ಕಾನೂನುಬಾಹಿರ ಮತ್ತು ಪ್ರಾಣಿ ಹಿಂಸೆ ಆಗಿದ್ದು, ಕುರಿ ಕಾಳಗ ನಡೆಸಬೇಡಿ ಎಂದು ಮೌಖಿಕವಾಗಿ ಸೂಚನೆ ನೀಡಿದ್ದರೂ ಮಾರ್ಚ್ 14 ಹಾಗೂ 15ರಂದು ಕುರಿ ಕಾಳಗ ನಡೆದಿದ್ದಾರೆ.  ಆದ್ದರಿಂದ ಆಯೋಜಕರ ವಿರುದ್ದ ಪಾಣಿ ಹಿಂಸೆ ಪ್ರತಿಬಂಧಕ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT