ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಧಾರವಾಡ: ಆನ್‌ಲೈನ್‌ನಲ್ಲಿ ₹ 14.72 ಲಕ್ಷ ವಂಚನೆ

Published 22 ಮೇ 2024, 15:42 IST
Last Updated 22 ಮೇ 2024, 15:42 IST
ಅಕ್ಷರ ಗಾತ್ರ

ಧಾರವಾಡ: ‘ಆನ್‌ಲೈನ್‌’ ಅರೆಕಾಲಿಕ ಕೆಲಸದ (ಪಾರ್ಟ್‌ ಟೈಂ ಜಾಬ್‌) ಆಮಿಷಕ್ಕೆ ಮರುಳಾಗಿ ವ್ಯಕ್ತಿಯೊಬ್ಬರು ₹14.72ಲಕ್ಷ ಹಣವನ್ನು ಆನ್‌ಲೈನ್‌ನಲ್ಲಿ ಪಾವತಿಸಿ ಮೋಸ ಹೋಗಿದ್ದಾರೆ, ಈ ಕುರಿತು ನಗರದ ಸೆನ್‌ ಠಾಣೆಯಲ್ಲಿ (ಸೈಬರ್‌, ಆರ್ಥಿಕ ಮತ್ತು ಕ್ರೈಂ) ಪ್ರಕರಣ ದಾಖಲಾಗಿದೆ.

ಕುಂದಗೋಳದ ಬಾಗವಾಡದ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ಧಾರೆ. ‘ಪಾರ್ಟ್‌ ಟೈಂ ಆನ್‌ಲೈನ್‌ ಅಸಿಸ್ಟೆಂಟ್‌ ಕೆಲಸ ಇದೆ ಎಂದು ಟೆಲಿಗ್ರಾಂನಲ್ಲಿ ಸಂದೇಶ (ಪೋಸ್ಟ್‌) ಇತ್ತು. ರಶ್ಮಿ ಭಟ್‌ ಮತ್ತು ಭಾವನಾ ಕೆ. ಎಂಬ ಐಡಿಗಳಿಂದ ಚಾಟ್‌ ಮಾಡಿ ನನನ್ನು ನಂಬಿಸಿ ಹಂತಹಂತವಾಗಿ ಆನ್‌ಲೈನ್‌ನಲ್ಲಿ ₹14.72 ಲಕ್ಷ ಹಣವನ್ನು ಯಪಿಐ ಐಡಿ, ಬ್ಯಾಂಕ್‌ ಖಾತೆಗಳಿಗೆ ಪಾವತಿಸಿಕೊಂಡು ವಂಚನೆ ಮಾಡಿದ್ಧಾರೆ’ ಎಂದು ದೂರಿನಲ್ಲಿ ತಿಳಿಸಿದ್ಧಾರೆ.

‘ದೂರದಾರನಿಗೆ ವಂಚಕರು ಹೋಟೆಲ್‌ವೊಂದರ ಪೋಸ್ಟ್‌ ಹಾಕಿ ಲೈಕ್‌ ಮಾಡಿ ಸ್ಕ್ರೀನ್‌ ಶಾಟ್‌ ತೆಗೆದು ಪೋಸ್ಟ್‌ ಮಾಡುವಂತೆ ಹಾಗೂ ₹10 ಸಾವಿರ ಹಣ ಪಾವತಿಸುವಂತೆ ತಿಳಿಸಿದ್ದಾರೆ. ದೂರುದಾರ ಅವರು ಹೇಳಿದ್ದನ್ನು ಮಾಡಿದಾಗ ಪ್ರತಿಯಾಗಿ ₹17 ಸಾವಿರ ರಿವಾರ್ಡ್‌ ಎಂದು ಆತನ ಖಾತೆಗೆ ಪಾವತಿಸಿದ್ಧಾರೆ. ನಂತರ ಹಂತಹಂತವಾಗಿ ದೂರುದಾರನಿಂದ ₹14.72 ಲಕ್ಷ ಹಾಕಿಸಿಕೊಂಡು ವಂಚಿಸಿದ್ದಾರೆ. ವಂಚಕರ ಜಾಡು ಪತ್ತೆ ನಿಟ್ಟಿನಲ್ಲಿ ಶೋಧ ಆರಂಭಿಸಿದ್ದೇವೆ’ ಎಂದು ಸೈಬರ್‌ ಕ್ರೈಂ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT